Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ನೆರವಿಗೆ ನಿಂತ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್

Virat Kohli

Krishnaveni K

ಮೆಲ್ಬೊರ್ನ್ , ಶನಿವಾರ, 28 ಡಿಸೆಂಬರ್ 2024 (10:44 IST)
ಮೆಲ್ಬೊರ್ನ್: ಆಸ್ಟ್ರೇಲಿಯಾದಲ್ಲಿ ಪ್ರೇಕ್ಷಕರಿಂದ ಹೀಯಾಳಿಕೆಗೆ ಒಳಗಾಗಿರುವ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ನೆರವಿಗೆ ಈಗ ವೇಗಿ ಜಸ್ಪ್ರೀತ್ ಬುಮ್ರಾ ಸಂಜನಾ ಗಣೇಶನ್ ನಿಂತಿದ್ದಾರೆ.
 

ವಿರಾಟ್ ಕೊಹ್ಲಿ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ಆಸೀಸ್ ಯುವ ಬ್ಯಾಟಿಗ ಸ್ಯಾಮ್ ಕಾನ್ ಸ್ಟಾಸ್ ಗೆ ಢಿಕ್ಕಿ ಹೊಡೆದಿದ್ದು ಭಾರೀ ವಿವಾದಕ್ಕೆ ಗುರಿಯಾಗಿತ್ತು. ಘಟನೆ ಸಂಬಂಧ ಐಸಿಸಿ ಕೊಹ್ಲಿಗೆ ದಂಡದ ಶಿಕ್ಷೆಯನ್ನೂ ನೀಡಿದೆ. ಆದರೆ ಇದಾದ ಬಳಿಕ ಆಸೀಸ್ ಪ್ರೇಕ್ಷಕರು ಕೊಹ್ಲಿಯನ್ನು ಎಲ್ಲಿ ಕಂಡರಲ್ಲಿ ಹೀಯಾಳಿಸುತ್ತಿದ್ದಾರೆ.

ನಿನ್ನೆಯ ದಿನದಾಟದಲ್ಲಿ ಕೊಹ್ಲಿ 36 ರನ್ ಗಳಿಸಿ ಔಟಾಗಿದ್ದಾರೆ. ಔಟಾಗಿ ಪೆವಿಲಿಯನ್ ಗೆ ಮರಳುವಾಗ ಆಸೀಸ್ ಪ್ರೇಕ್ಷಕರು ಕೊಹ್ಲಿಯನ್ನು ಮೂದಲಿಸಿದ್ದಾರೆ. ಇದು ಕೊಹ್ಲಿಯ ಗಮನಕ್ಕೂ ಬಂದಿದ್ದು ಪೆವಿಲಿಯನ್ ನತ್ತ ಸಾಗುತ್ತಿದ್ದ ಕೊಹ್ಲಿ ಹಿಂದೆ ಬಂದು ತಮ್ಮನ್ನು ಹೀಯಾಳಿಸುತ್ತಿದ್ದ ಪ್ರೇಕ್ಷಕರತ್ತ ಉರಿಗಣ್ಣು ಬಿಟ್ಟಿದ್ದಾರೆ. ಈ ವೇಳೆ ಆಸೀಸ್ ಸಿಬ್ಬಂದಿಗಳನ್ನು ಅವರನ್ನು ಸಮಾಧಾನಪಡಿಸಿ ಒಳಗೆ ಕಳುಹಿಸಿದ್ದಾರೆ.

ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯ ಅಭಿಮಾನಿಗಳು ಕೊಹ್ಲಿಗೆ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ಆ ಪೈಕಿ ಸಂಜನಾ ಕೂಡಾ ಒಬ್ಬರು. ಕೊಹ್ಲಿಯ ಫೋಟೋ ಪ್ರಕಟಿಸಿ ನಮ್ಮೆಲ್ಲರ ಬೆಂಬಲ ಭಾರತೀಯ ಸ್ಟಾರ್ ವಿರಾಟ್ ಕೊಹ್ಲಿ ಮೇಲಿದೆ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs AUS: ತಗ್ಗೋದೇ ಇಲ್ಲ ಎಂದು ಪುಷ್ಪ ಸ್ಟೈಲ್ ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಸೆಲೆಬ್ರೇಷನ್ ವಿಡಿಯೋ