ವಾಯುಪಡೆ ದಿನಾಚರಣೆಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ನೋಡಿ ರೋಮಾಂಚನಗೊಂಡ ಸಚಿನ್

ಬುಧವಾರ, 9 ಅಕ್ಟೋಬರ್ 2019 (07:47 IST)
ನವದೆಹಲಿ: ವಾಯುಪಡೆ ದಿನಾಚರಣೆಯಲ್ಲಿ ಪಾಲ್ಗೊಂಡ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ವಿಂಗ್ ಕಮಾಂಡರ್ ಅಭಿನಂದನ್ ಜೈನ್ ಫ್ಲೈಯಿಂಗ್ ಸ್ಕ್ವಾಡ್ ಮುನ್ನಡೆಸುವುದು ನೋಡಿ ರೋಮಾಂಚನಗೊಂಡೆ ಎಂದು ಬರೆದುಕೊಂಡಿದ್ದಾರೆ.


ಏರ್ ಸ್ಟ್ರೈಕ್ ಬಳಿಕ ಅಕಸ್ಮಾತ್ತಾಗಿ ಪಾಕ್ ಗಡಿ ದಾಟಿದ್ದ ಅಭಿನಂದನ್ ಉಭಯ ದೇಶಗಳ ನಡುವೆ ನಡೆದ ಮಾತುಕತೆ ಬಳಿಕ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದರು. ಕೆಲವೇ ಸಮಯದ ಬಳಿಕ ವಾಯುಪಡೆ ಸೇವೆಗೆ ಮರಳಿದ್ದ  ಅಭಿನಂದನ್ ರನ್ನು ವಾಯುಪಡೆ ದಿನಾಚರಣೆಯಲ್ಲಿ ನೋಡಿ ಸಚಿನ್ ಖುಷಿ ವ್ಯಕ್ತಪಡಿಸಿದ್ದಾರೆ.

ಅಭಿನಂದನ್ ಮಿಗ್ 21 ಯದ್ಧ ವಿಮಾನವನ್ನು ಮುನ್ನಡೆಸುವ ವಿಡಿಯೋ ಪ್ರಕಟಿಸಿರುವ ಸಚಿನ್ ಅಭಿನಂದನ್ ವಿಮಾನ ಮುನ್ನಡೆಸುವುದನ್ನು ನೋಡುತ್ತಿದ್ದರೆ ರೋಮಾಂಚನವಾಗುತ್ತಿದೆ. ಇವರು ನಮಗೆಲ್ಲಾ ಸ್ಪೂರ್ತಿ ಎಂದು ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆರ್ ಅಶ್ವಿನ್ ನನ್ನ ದಾಖಲೆ ಮುರಿಯೋದು ಖಂಡಿತಾ ಎಂದ ಹರ್ಭಜನ್ ಸಿಂಗ್