Select Your Language

Notifications

webdunia
webdunia
webdunia
webdunia

ಮೈದಾನದಲ್ಲಿ ದೇವರ ಪ್ರಾರ್ಥನೆ: ರಿಜ್ವಾನ್ ಬಳಿಕ ಗಮನಸೆಳೆದ ಆಫ್ರಿಕಾದ ಕೇಶವ್ ಮಹಾರಾಜ್

ಮೈದಾನದಲ್ಲಿ ದೇವರ ಪ್ರಾರ್ಥನೆ: ರಿಜ್ವಾನ್ ಬಳಿಕ ಗಮನಸೆಳೆದ ಆಫ್ರಿಕಾದ ಕೇಶವ್ ಮಹಾರಾಜ್
ಧರ್ಮಶಾಲಾ , ಬುಧವಾರ, 18 ಅಕ್ಟೋಬರ್ 2023 (08:52 IST)
Photo Courtesy: Twitter
ಧರ್ಮಶಾಲಾ: ಮೊನ್ನೆಯಷ್ಟೇ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಮೈದಾನದಲ್ಲೇ ನಮಾಜ್ ಮಾಡಿ ಸುದ್ದಿಯಾಗಿದ್ದರು.

ರಿಜ್ವಾನ್ ವರ್ತನೆ ಹಲವರಿಂದ ಟೀಕೆಗೊಳಗಾಗಿತ್ತು. ನಮಾಜ್ ಮಾಡಲು ಪಂದ್ಯದ ಸಮಯ ಹಾಳು ಮಾಡಿದರು ಎಂಬ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಭಾರತೀಯ ಪ್ರೇಕ್ಷಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಇದರ ನಡುವೆ ಅದೇ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಹಾರ್ದಿಕ್ ಪಾಂಡ್ಯ ದೇವರಿಗೆ ಪ್ರಾರ್ಥನೆ ಮಾಡಿ ಬೌಲಿಂಗ್ ಮಾಡಿ ಆ ಕ್ಷಣದಲ್ಲೇ  ವಿಕೆಟ್ ಪಡೆದಿದ್ದ ವಿಡಿಯೋ ವೈರಲ್ ಆಗಿತ್ತು.

ಇದೀಗ ಭಾರತೀಯ ಮೂಲದ ದ. ಆಫ್ರಿಕಾ ಕ್ರಿಕೆಟಿಗ ಕೇಶವ್ ಮಹಾರಾಜ್ ಮೈದಾನದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಸುದ್ದಿಯಾಗಿದ್ದಾರೆ. ಕೇಶವ್ ಮಹಾರಾಜ್ ಮೂಲತಃ ಭಾರತೀಯ ಹಿಂದೂ. ಇದೀಗ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೇಶವ್ ಇಷ್ಟದೇವರ ಪ್ರಾರ್ಥನೆ ಸಲ್ಲಿಸಿ ಬೌಲಿಂಗ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ. ಜೊತೆಗೆ ಅವರ ಬ್ಯಾಟ್ ಮೇಲೆ ಕೂಡಾ ಓಂ ಎಂದು ಬರೆಯಲಾಗಿರುವುದನ್ನು ನೆಟ್ಟಿಗರು ಗುರುತಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ಮಣಿಸಿದ ಅಫ್ಘಾನಿಸ್ತಾನ ಕಿವೀಸ್ ಕಿವಿ ಹಿಂಡುತ್ತಾ?