Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ಮಣಿಸಿದ ಅಫ್ಘಾನಿಸ್ತಾನ ಕಿವೀಸ್ ಕಿವಿ ಹಿಂಡುತ್ತಾ?

ಏಕದಿನ ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ಮಣಿಸಿದ ಅಫ್ಘಾನಿಸ್ತಾನ ಕಿವೀಸ್ ಕಿವಿ ಹಿಂಡುತ್ತಾ?
ಚೆನ್ನೈ , ಬುಧವಾರ, 18 ಅಕ್ಟೋಬರ್ 2023 (08:30 IST)
ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ನ್ಯೂಜಿಲೆಂಡ್ ಇದುವರೆಗೆ 3 ಪಂದ್ಯಗಳ ಪೈಕಿ 3 ರನ್ನೂ ಗೆದ್ದು ಸೋಲರಿಯದ ಸರದಾರನಂತೆ ಮೆರೆಯುತ್ತಿದೆ. ಖಾಯಂ ನಾಯಕ ಕೇನ್ ವಿಲಿಯಮ್ಸನ್ ಕಳೆದ ಪಂದ್ಯಕ್ಕೆ ಪುನರಾಗಮನ ಮಾಡಿದ್ದರೂ ಮತ್ತೆ ಗಾಯಗೊಂಡಿದ್ದಾರೆ. ಹಾಗಿದ್ದರೂ ಅವರ ಅನುಪಸ್ಥಿತಿಯೇನೂ ತಂಡಕ್ಕೆ ಇದುವರೆಗೆ ಕಾಡಿಲ್ಲ.

ಇನ್ನೊಂದೆಡೆ ಅಫ್ಘಾನಿಸ್ತಾನ ಕೂಡಾ ತಾನು ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡಬಲ್ಲೆ ಎಂದು ಸಾಬೀತುಪಡಿಸಿದೆ. ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಗೆ ಸೋಲುಣಿಸಿ ಎಲ್ಲರನ್ನೂ ಅಚ್ಚರಿಗೊಳಪಡಿಸಿತ್ತು. ಇದೀಗ ಚೆನ್ನೈನ ತಿರುವಿನ ಪಿಚ್ ನಲ್ಲಿ ನ್ಯೂಜಿಲೆಂಡ್ ಗೆ ಸವಾಲೊಡ್ಡುವ ವಿಶ್ವಾಸದಲ್ಲಿದೆ. ಈ ಪಂದ್ಯ ಮಧ‍್ಯಾಹ್ನ 2 ಗಂಟೆಗೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್ ಕ್ರಿಕೆಟ್: ಆಫ್ರಿಕಾಗೆ ಸೋಲಿನ ಆಘಾತ ನೀಡಿದ ನೆದರ್ಲ್ಯಾಂಡ್ಸ್