Publish Date: Wed, 18 Oct 2023 (08:20 IST)
Updated Date: Wed, 18 Oct 2023 (08:38 IST)
ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಬಂದಿದೆ. ಪ್ರಬಲ ದ.ಆಫ್ರಿಕಾವನ್ನು ಕ್ರಿಕೆಟ್ ಶಿಶು ನೆದರ್ಲ್ಯಾಂಡ್ಸ್ 38 ರನ್ ಗಳಿಂದ ಸೋಲಿಸಿದೆ.
ಮಳೆಯಿಂದಾಗಿ ಅಡಚಣೆಗೊಂಡ ಪಂದ್ಯ ತಡವಾಗಿ ಆರಂಭವಾಯಿತು. ಹೀಗಾಗಿ ಪಂದ್ಯ 43 ಓವರ್ ಗಳಿಗೆ ಕಡಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ 43 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆಫ್ರಿಕಾಗೆ ಅಗ್ರ ಕ್ರಮಾಂಕ ಕೈ ಕೊಟ್ಟಿತು. ಆಫ್ರಿಕಾ ಪರ ಡೇವಿಡ್ ಮಿಲ್ಲರ್ 43, ಕೇಶವ್ ಮಹಾರಾಜ 40 ರನ್ ಗಳಿಸಿದರು. ಅಂತಿಮವಾಗಿ ಆಫ್ರಿಕಾ 42.5 ಓವರ್ ಗಳಲ್ಲಿ 207 ಕ್ಕೆ ಆಲೌಟ್ ಆಯಿತು. ಇದರೊಂದಿಗೆ ಆಘಾತಕಾರಿ ಸೋಲು ಅನುಭವಿಸಿತು.