ಗೆಲ್ಲುತ್ತಿದ್ದ ಹಾಗೇ ವಿರಾಟ್ ಕೊಹ್ಲಿ ಮೇಲಿನ ದ.ಆಫ್ರಿಕನ್ನರ ವರಸೆಯೇ ಬದಲಾಯ್ತು!

ಸೋಮವಾರ, 29 ಜನವರಿ 2018 (11:27 IST)
ಮುಂಬೈ: ದ.ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಸೋತಾಗ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಆಫ್ರಿಕಾ ಮಾಜಿ ಕ್ರಿಕೆಟಿಗರು ಕುಹುಕವಾಡಿದ್ದರು. ಇದೀಗ ಮೂರನೇ ಟೆಸ್ಟ್ ಗೆದ್ದ ಬಳಿಕ ಕೊಹ್ಲಿ ಬಗ್ಗೆ ಮಾಜಿ ಆಟಗಾರರ ಅಭಿಪ್ರಾಯವೇ ಬೇರೆಯಾಗಿದೆ.
 

ದ.ಆಫ್ರಿಕಾದ ಮಾಜಿ ನಾಯಕ ಕೆಪ್ಲೆರ್ ವೆಸೆಲ್ ಕೊಹ್ಲಿ ಒಬ್ಬ ಸ್ಪೂರ್ತಿದಾಯಕ ನಾಯಕ. ಆದರೆ ಅವರಿಗೆ ಕೊಂಚ ಸಮಯ ಬೇಕಷ್ಟೇ ಎಂದಿದ್ದಾರೆ.

ಭಾರತಕ್ಕೆ ಬೇಕಾದ ಫಲಿತಾಂಶ ನೀಡುವವರೆಗೂ ಕೊಹ್ಲಿ ನಾಯಕತ್ವವನ್ನು ತೆಗಳಲು ಸಾಧ್ಯವಿಲ್ಲ. ಅವರು ನಾಯಕನಾಗಿ ತಮ್ಮ ತಂಡಕ್ಕೆ ಮಾದರಿಯಾಗುತ್ತಾರೆ, ಸ್ಪೂರ್ತಿ ತುಂಬುತ್ತಾರೆ. ಅವರು ಸ್ವಲ್ಪ ಭಾವನಾತ್ಮಕ ವ್ಯಕ್ತಿ. ಅದೊಂದೇ ಅವರ ವೀಕ್ ನೆಸ್ ಎಂದ ಕೆಪ್ಲರ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲಾರಾ ದಾಖಲೆಗೇ ಕನ್ನ ಹಾಕಿದ ವಿರಾಟ್ ಕೊಹ್ಲಿ!