ಮುಂಬೈ: ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್, ವಿಶ್ವಕಪ್ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ನಲ್ಲಿ ಟೀಂ ಇಂಡಿಯಾ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಬೇಕು ಎಂಬ ವಾದ ಕೇಳಿಬಂದಿತ್ತು.
ಇದನ್ನು ನಾಯಕ ರೋಹಿತ್ ಶರ್ಮಾ ಕೂಡಾ ಅನುಮೋದಿಸಿದ್ದರು. ಇದೀಗ ಇತರೆ ಆಟಗಾರರಿಗೆ ತಾವೇ ಮಾದರಿಯಾಗಲು ಹೊರಟಿದ್ದಾರೆ ರೋಹಿತ್.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ರೋಹಿತ್ ಕೆಲವು ಪಂದ್ಯಗಳಿಂದ ವಿಶ್ರಾಂತಿ ಪಡೆಯಲು ತೀರ್ಮಾನಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರಿಗೆ ಯಾವಾಗ ವಿಶ್ರಾಂತಿ ಬೇಕೆನಿಸುತ್ತದೋ ಆಗ ವಿಶ್ರಾಂತಿ ನೀಡುವುದಾಗಿ ಕೋಚ್ ಮಾರ್ಕ್ ಬೌಷರ್ ಭರವಸೆ ನೀಡಿದ್ದಾರೆ.