Publish Date: Sun, 06 Aug 2023 (17:00 IST)
Updated Date: Sun, 06 Aug 2023 (17:02 IST)
ಕ್ಯಾಲಿಫೋರ್ನಿಯಾ: ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಮುಕ್ತಾಯದ ಬಳಿಕ ತವರಿಗೆ ಬಾರದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಮೆರಿಕಾಗೆ ತೆರಳಿದ್ದಾರೆ.
ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕ್ರಿಕೆಟ್ ಅಕಾಡೆಮಿಯೊಂದನ್ನು ರೋಹಿತ್ ಉದ್ಘಾಟನೆ ಮಾಡಲಿದ್ದಾರೆ. ಕ್ರಿಕಿಂಗ್ಡಮ್ ಎನ್ನುವ ಕ್ರಿಕೆಟ್ ಅಕಾಡೆಮಿಯೊಂದನ್ನು ರೋಹಿತ್ ಉದ್ಘಾಟಿಸಲಿದ್ದಾರೆ.
ಕ್ರಿಕಿಂಗ್ಡಮ್ ಕ್ರಿಕೆಟ್ ಅಕಾಡೆಮಿ ರೋಹಿತ್ ಶರ್ಮಾ ಒಡೆತನದ ಕ್ರಿಕೆಟ್ ಅಕಾಡೆಮಿಯಾಗಿದೆ. ಈಗಾಗಲೇ ಕ್ರಿಕಿಂಗ್ಡಮ್ ಭಾರತದ ಸೇರಿದಂತೆ ಅನೇಕ ಕಡೆ ತನ್ನ ಶಾಖೆಗಳನ್ನು ಹೊಂದಿದೆ. ಇದೀಗ ಅಮೆರಿಕಾದಲ್ಲಿ ಪ್ರತಿಭಾವಂತ ಕ್ರಿಕೆಟಿಗರನ್ನು ಹುಟ್ಟುಹಾಕುವ ಉದ್ದೇಶದಿಂದ ಹಿಟ್ ಮ್ಯಾನ್ ಕ್ರಿಕೆಟ್ ಅಕಾಡೆಮಿ ಆರಂಭಿಸುತ್ತಿದ್ದಾರೆ.