Select Your Language

Notifications

webdunia
webdunia
webdunia
webdunia

ಯುವ ಆಟಗಾರರಿಗಾಗಿ ತಮ್ಮ ಮೆಚ್ಚಿನ ಸ್ಥಾನವನ್ನೇ ಬಿಟ್ಟುಕೊಡಲಿರುವ ವಿರಾಟ್ ಕೊಹ್ಲಿ?

ಯುವ ಆಟಗಾರರಿಗಾಗಿ ತಮ್ಮ ಮೆಚ್ಚಿನ ಸ್ಥಾನವನ್ನೇ ಬಿಟ್ಟುಕೊಡಲಿರುವ ವಿರಾಟ್ ಕೊಹ್ಲಿ?
ಮುಂಬೈ , ಶನಿವಾರ, 5 ಆಗಸ್ಟ್ 2023 (17:57 IST)
Photo Courtesy: Twitter
ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ ಹಿರಿಯ ಆಟಗಾರರು ಸ್ಥಾನ ಬಿಟ್ಟುಕೊಡುತ್ತಿದ್ದಾರೆ.

ಇದೀಗ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಯುವ ಆಟಗಾರರಿಗಾಗಿ ಮುಂಬರುವ ಏಷ್ಯಾ ಕಪ್, ವಿಶ್ವಕಪ್ ಟೂರ್ನಿಗಳಲ್ಲಿ ತಮ್ಮ ಮೆಚ್ಚಿನ ಮೂರನೇ ಕ್ರಮಾಂಕವನ್ನೇ ಬಿಟ್ಟುಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಫಿಟ್ ಆಗಿ ತಂಡಕ್ಕೆ ಬಂದ ಮೇಲೆ ಶುಬ್ಮನ್ ಗಿಲ್ ಅಥವಾ ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಹೀಗಾಗಿ ಕೊಹ್ಲಿ ತಮ್ಮ ಸ್ಥಾನವನ್ನು ಈ ಆಟಗಾರರಿಗೆ ಬಿಟ್ಟುಕೊಡಬಹುದು ಎಂಬ ಮಾತು ಕೇಳಿಬರುತ್ತಿದೆ. ಕಳೆದ ವೆಸ್ಟ್ ಇಂಡೀಸ್ ಸರಣಿಯಲ್ಲೂ ಭಾರತ ತಂಡ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಸಾಕಷ್ಟು ಪ್ರಯೋಗ ನಡೆಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ, ವಿಂಡೀಸ್ ಗೆ ದಂಡದ ಬರೆ ಹಾಕಿದ ಐಸಿಸಿ