Publish Date: Sat, 05 Aug 2023 (09:29 IST)
Updated Date: Sat, 05 Aug 2023 (09:33 IST)
ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟಿ20 ಪಂದ್ಯ ಸೋತ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಸಿಕ್ಕಿದೆ.
ದ್ವಿತೀಯ ಪಂದ್ಯದಲ್ಲಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ ಐಸಿಸಿ ದಂಡದ ಶಿಕ್ಷೆ ನೀಡಿದೆ. ಪಂದ್ಯ ಶುಲ್ಕದ ಶೇ.5 ರಷ್ಟು ದಂಡವಾಗಿ ತೆರಲು ಸೂಚಿಸಿದೆ. ಭಾರತ ನಿಗದಿತ ಸಮಯಕ್ಕಿಂತ ಒಂದು ಓವರ್ ಹಿನ್ನಡೆಯಲ್ಲಿತ್ತು.
ಭಾರತ ಮಾತ್ರವಲ್ಲ ವೆಸ್ಟ್ ಇಂಡೀಸ್ ಗೂ ಇದೇ ಅಪರಾಧಕ್ಕೆ ಶೇ.10 ರಷ್ಟು ದಂಡ ವಿಧಿಸಿದೆ. ವಿಂಡೀಸ್ ನಿಗದಿತ ಸಮಯಕ್ಕಿಂತ 2 ಓವರ್ ಹಿಂದಿತ್ತು.