Publish Date: Sun, 06 Aug 2023 (09:00 IST)
Updated Date: Sun, 06 Aug 2023 (09:05 IST)
ಮುಂಬೈ: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಎಲ್ಲಾ ತಂಡಗಳು ಆಟಗಾರರ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಲು ಇನ್ನು 30 ದಿನವಷ್ಟೇ ಬಾಕಿಯಿದೆ. ಆದರೆ ಭಾರತ ತಂಡಕ್ಕೆ ಗಾಯಾಳುಗಳ ಚಿಂತೆಯೇ ಮುಗಿದಿಲ್ಲ.
ಗಾಯಗೊಂಡಿರುವ ಭಾರತದ ಎಲ್ಲಾ ಸ್ಟಾರ್ ಆಟಗಾರರು ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಶ್ರೇಯಸ್ ಅಯ್ಯರ್ ಫಿಟ್ನೆಸ್ ಮರಳಿ ಪಡೆಯಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಕೆಎಲ್ ರಾಹುಲ್ ಇನ್ನೂ ಅಧಿಕೃತವಾಗಿ ಫಿಟ್ನೆಸ್ ಸರ್ಟಿಫಿಕೇಟ್ ನೀಡಿಲ್ಲ. ರಿಷಬ್ ಪಂತ್ ಚೇತರಿಸಿಕೊಳ್ಳುವ ಸಾಧ‍್ಯತೆಯೇ ಇಲ್ಲ.
ಆದರೆ ಒಂದು ಸಮಾಧಾನಕರ ವಿಚಾರವೆಂದರೆ ಜಸ್ಪ್ರೀತ್ ಬುಮ್ರಾ ಫಿಟ್ ಆಗಿರುವುದು. ಆದರೆ ವಿಶ್ವಕಪ್ ಗೆ ಮೊದಲು ಐರ್ಲೆಂಡ್ ಸೀರೀಸ್, ಏಷ್ಯಾ ಕಪ್ ಪಂದ್ಯಾವಳಿಯಿದ್ದು, ಈ ವೇಳೆ ಯಾವುದೇ ಆಟಗಾರ ಗಾಯಗೊಳ್ಳದಂತೆ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಲಿದೆ.
Krishnaveni K
Publish Date: Sun, 06 Aug 2023 (09:00 IST)
Updated Date: Sun, 06 Aug 2023 (09:05 IST)