ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕ್ರಿಕೆಟಿಗ ರಿಷಬ್ ಪಂತ್ ನಿರೀಕ್ಷೆಗೂ ಮೀರಿ ಚೇತರಿಸಿಕೊಳ್ಳುತ್ತಿದ್ದಾರೆ.
ರಿಷಬ್ ಇನ್ನು ಒಂದು ವರ್ಷ ಮನೆಯಲ್ಲೇ ಇರಬೇಕಾಗಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಆರೇ ತಿಂಗಳಲ್ಲಿ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳುವಷ್ಟು ಫಿಟ್ ಆದರು. ಊರುಗೋಲಿನ ಸಹಾಯವಿಲ್ಲದೇ ನಡೆದಾಡುತ್ತಿರುವ ರಿಷಬ್ ಸಣ್ಣ ಪುಟ್ಟ ವರ್ಕೌಟ್ ಕೂಡಾ ಮಾಡಲು ಆರಂಭಿಸಿದ್ದರು.
ಇದೀಗ ರಿಷಬ್ ಬ್ಯಾಟಿಂಗ್ ಅಭ್ಯಾಸ ಕೂಡಾ ಶುರು ಮಾಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಎನ್ ಸಿಎನಲ್ಲಿ ಗಂಟೆಗೆ 140 ಕಿ.ಮೀ. ವೇಗದ ಚೆಂಡುಗಳನ್ನು ಎದುರಿಸುತ್ತಿದ್ದಾರಂತೆ. ಈ ಸುದ್ದಿ ಅಭಿಮಾನಿಗಳಿಗೆ ಖುಷಿ ತಂದಿದೆ. ಅವರು ಇದೇ ರೀತಿ ಮುಂದುವರಿದರೆ ಸದ್ಯದಲ್ಲೇ ಕೀಪಿಂಗ್ ಅಭ್ಯಾಸ ಕೂಡಾ ಆರಂಭಿಸುವುದು ಗ್ಯಾರಂಟಿ. ಅಂತೂ ಈ ವರ್ಷದ ಅಂತ್ಯಕ್ಕೆ ಮತ್ತೆ ಕ್ರಿಕೆಟ್ ಕಣಕ್ಕೆ ಮರಳುವಷ್ಟು ಫಿಟ್ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.