ಪತ್ನಿ, ಮಗಳನ್ನು ನೋಡಲು ಬಂದ ರೋಹಿತ್ ಶರ್ಮಾ ಮತ್ತೆ ತಂಡಕ್ಕೆ ಮರಳುವುದು ಯಾವಾಗ ಗೊತ್ತಾ?

ಮಂಗಳವಾರ, 1 ಜನವರಿ 2019 (09:46 IST)
ಮುಂಬೈ: ಹೆಣ್ಣು ಮಗುವಿಗೆ ಅಪ್ಪನಾದ ಖುಷಿಯಲ್ಲಿರುವ ರೋಹಿತ್ ಶರ್ಮಾ ಇದೀಗ ಆಸ್ಟ್ರೇಲಿಯಾದಿಂದ ತವರು ಮುಂಬೈಗೆ ಬಂದಿಳಿದಿದ್ದಾರೆ.


ತನ್ನ ಪತ್ನಿ ಮತ್ತು ಮಗುವಿನ ಜತೆಗಿರಲು ಮುಂಬೈಗೆ ಬಂದಿಳಿದಿರುವ ರೋಹಿತ್ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ. ಹೀಗಾಗಿ ಅವರು ಮತ್ತೆ ತಂಡವನ್ನು ಕೂಡಿಕೊಳ್ಳುವುದು ಯಾವಾಗ ಎಂಬ ಪ್ರಶ್ನೆಗೆ ಇದೀಗ ಬಿಸಿಸಿಐ ಅಧಿಕೃತ ಪ್ರಕಟಣೆ ನೀಡಿದೆ.

ಜನವರಿ 8 ರಿಂದ ಏಕದಿನ ಸರಣಿಯ ವೇಳೆಗೆ ರೋಹಿತ್ ಮತ್ತೆ ಆಸ್ಟ್ರೇಲಿಯಾದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಈಗ ಮುಂಬೈಗೆ ಬಂದಿದ್ದು, ತಮ್ಮ ಪತ್ನಿ, ಮಗುವಿನ ಜತೆ ಕಾಲಕಳೆಯಲಿದ್ದಾರೆ. ಹೆಣ್ಣು ಮಗುವಿಗೆ ಅಪ್ಪನಾಗಿರುವ ರೋಹಿತ್ ಗೆ ಅಭಿನಂದನೆಗಳು ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಹೀಗಾಗಿ ಬಿಗ್ ಹಿಟ್ಟರ್ ಸೀಮಿತ ಓವರ್ ಪಂದ್ಯಕ್ಕಾಗುವಾಗ ತಂಡದೊಂದಿಗೆ ಇರಲಿದ್ದಾರೆ ಎನ್ನುವುದು ಖಚಿತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಯಾರಿಗೋ ನಾವೇನೆಂದು ಪ್ರೂವ್ ಮಾಡ್ಕೊಳ್ಳಲು ಮಗು ಮಾಡಿಕೊಂಡಿಲ್ಲ ಎಂದ ಸಾನಿಯಾ ಮಿರ್ಜಾ