Publish Date: Mon, 31 Dec 2018 (11:43 IST)
Updated Date: Mon, 31 Dec 2018 (11:44 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ತೃತೀಯ ಟೆಸ್ಟ್ ಪಂದ್ಯದಲ್ಲಿ ಬದಲಿ ಕ್ಷೇತ್ರರಕ್ಷಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಮೇಲೆ ಅಂಪಾಯರ್ ಇಯಾನ್ ಗೋಲ್ಡ್ ಸಿಟ್ಟಿಗೆದ್ದ ಘಟನೆ ನಡೆದಿದೆ.
ಮಿಡ್ ಆನ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಹುಲ್ ಜಡೇಜಾ ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್ ತಮ್ಮತ್ತ ತಳ್ಳಿದ ಬಾಲ್ ಫೀಲ್ಡ್ ಮಾಡಿದರು. ಬಳಿಕ ಜಡೇಜಾ ಗಮನ ತಮ್ಮ ಕಡೆಗೆ ಇಲ್ಲದಿದ್ದರೂ ಅವರ ಕಡೆಗೆ ಬಾಲ್ ಎಸೆದರು. ಈ ವೇಳೆ ಅದು ತಪ್ಪಿ ಅಂಪಾಯರ್ ಗೋಲ್ಡ್ ಮುಖದತ್ತ ಬಿತ್ತು.
ಇದರಿಂದ ಸಿಟ್ಟಿಗೆದ್ದ ಗೋಲ್ಡ್ ಸಹಜವಾಗಿಯೇ ರಾಹುಲ್ ರನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಪ್ರಮಾದ ಅರಿತ ರಾಹುಲ್ ತಕ್ಷಣ ಅಂಪಾಯರ್ ಬಳಿ ಕ್ಷಮೆ ಯಾಚಿಸಿ ಸಮಾಧಾನಿಸಲು ಮುಂದಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಕೊಹ್ಲಿ ಹೋಗ್ಲಿ ಬಿಡು ಎಂದು ರಾಹುಲ್ ಕಡೆಗೆ ಸನ್ನೆ ಮಾಡಿದ್ದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ