Publish Date: Sun, 30 Dec 2018 (06:34 IST)
Updated Date: Sun, 30 Dec 2018 (06:35 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ವರುಣ ಅಡ್ಡಿಯಾಗಿದ್ದಾನೆ.
ಗೆಲ್ಲಲು 399 ರನ್ ಗಳ ಗುರಿ ಬೆನ್ನತ್ತಿರುವ ಆಸೀಸ್ ನಾಲ್ಕನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿತ್ತು. ಆದರೆ ಅಂತಿಮ ದಿನವಾದ ಇಂದು ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ಒಂದೇ ಒಂದು ಬಾಲ್ ಆಟ ನಡೆದಿಲ್ಲ.
ಆಸ್ಟ್ರೇಲಿಯಾ ಸಮಯದ ಪ್ರಕಾರ ಬೆಳಿಗ್ಗೆ 10.45 ಕ್ಕೆ ಮಳೆ ನಿಂತು 11 ಗಂಟೆಗೆ ಆಟ ಮತ್ತೆ ಶುರುವಾಗುವ ಸೂಚನೆಯಿದ್ದರೂ ಮತ್ತೆ ಭಾರೀ ಮಳೆಯಾಗಿದ್ದರಿಂದ ಕ್ರಿಕೆಟಿಗರು ಪೆವಿಲಿಯನ್ ನಲ್ಲೇ ಕೂರಬೇಕಾಯಿತು. ಇದೀಗ ಉಳಿದ ಎರಡು ವಿಕೆಟ್ ಕಿತ್ತು ಮೆಲ್ಬೋರ್ನ್ ಅಂಗಣದಲ್ಲಿ ಇತಿಹಾಸ ರಚಿಸಬೇಕಿರುವ ಟೀಂ ಇಂಡಿಯಾ ಮಳೆಯಿಂದಾಗಿ ಹತಾಶೆಯಿಂದ ಕೂರುವಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ