Publish Date: Mon, 31 Dec 2018 (10:03 IST)
Updated Date: Mon, 31 Dec 2018 (10:04 IST)
ಮೆಲ್ಬೋರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಕ್ರಿಕೆಟ್ ಸರಣಿಯಲ್ಲಿ ಇನ್ನೇನಿದ್ದರೂ ಟೀಂ ಇಂಡಿಯಾ ಸರಣಿ ಗೆಲ್ಲಲು ಒಂದೇ ಪಂದ್ಯದಲ್ಲಿ ಗೆಲುವಿನ ಅಗತ್ಯವಿದೆ. ಈ ಹಿನ್ನಲ್ಲೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ತೃತೀಯ ಪಂದ್ಯದ ಗೆಲುವಿನ ನಂತರ ಮಾತನಾಡಿರುವ ಕೊಹ್ಲಿ ನಾವು ಇಷ್ಟಕ್ಕೇ ಸುಮ್ಮನಾಗಲ್ಲ. ಇಷ್ಟು ತನಕ ಬಂದಿದ್ದೇವೆ. ಇನ್ನು ಒಂದು ಮೆಟ್ಟಿಲು ಏರಿದರೆ ಸರಣಿ ಗೆಲುವಿನ ದೊಡ್ಡ ಸಾಧನೆ ಮಾಡುತ್ತೇವೆ. ಅದನ್ನು ಮಾಡಿಯೇ ತೀರುತ್ತೇವೆ. ಬೇರೆ ಯಾವುದರ ಬಗ್ಗೆಯೂ ನಾವು ತಲೆಕೆಡಿಸಿಕೊಳ್ಳಲ್ಲ ಎಂದು ಕೊಹ್ಲಿ ಶಪಥ ಮಾಡಿದ್ದಾರೆ.
ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿಯಿದ್ದು, ಭಾರತ ಒಂದು ಪಂದ್ಯ ಗೆದ್ದರೆ ಸರಣಿ ಗೆಲುವು ಸಿಗುತ್ತದೆ. ಒಂದು ವೇಳೆ ಸರಣಿ ಗೆದ್ದರೆ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ