Select Your Language

Notifications

webdunia
webdunia
webdunia
webdunia

ನಾಲ್ಕನೇ ಟೆಸ್ಟ್ ಆಡದೇ ರೋಹಿತ್ ಶರ್ಮಾ ದಿಡೀರ್ ಆಗಿ ಭಾರತಕ್ಕೆ ಮರಳುತ್ತಿರುವುದೇಕೆ ಗೊತ್ತಾ?!

ನಾಲ್ಕನೇ ಟೆಸ್ಟ್ ಆಡದೇ ರೋಹಿತ್ ಶರ್ಮಾ ದಿಡೀರ್ ಆಗಿ ಭಾರತಕ್ಕೆ ಮರಳುತ್ತಿರುವುದೇಕೆ ಗೊತ್ತಾ?!
ಮುಂಬೈ , ಸೋಮವಾರ, 31 ಡಿಸೆಂಬರ್ 2018 (11:01 IST)
ಮುಂಬೈ: ರೋಹಿತ್ ಶರ್ಮಾ ತೃತೀಯ ಟೆಸ್ಟ್ ಪಂದ್ಯದಲ್ಲಿ ಕೆಳಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಬಲ ಒದಗಿಸಿದ್ದರು. ಆದರೆ ಇದೀಗ ಅವರು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.


ಇದಕ್ಕೆ ಕಾರಣ ಅವರ ಪತ್ನಿ! ರೋಹಿತ್ ಮತ್ತು ಪತ್ನಿಗೆ ಹೆಣ್ಣು ಮಗುವಾಗಿದ್ದು, ರೋಹಿತ್ ಗೆ ಪತ್ನಿ ಜತೆಗಿರಲು  ಭಾರತಕ್ಕೆ ಮರಳಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ಈ ಬಗ್ಗೆ ಟೀಂ ಇಂಡಿಯಾ ಅಧಿಕೃತ ಪ್ರಕಟಣೆ ನೀಡಿಲ್ಲ. ಆದರೆ ಆಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ ರೋಹಿತ್ ಹೆರಿಗೆ ವೇಳೆ ಪತ್ನಿ ಜತೆಗಿರಲು ಕೋಚ್ ರವಿಶಾಸ್ತ್ರಿ ಮತ್ತು ನಾಯಕ ಕೊಹ್ಲಿ ಈ ಅವಕಾಶ ಕಲ್ಪಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಪತ್ನಿಯ ಬರ್ತ್ ಡೇಗೆ ಇದೇ ಮೊದಲ ಬಾರಿಗೆ ಬರ್ತ್ ಡೇ ದಿನ ನಿನ್ನ ಜತೆಗಿಲ್ಲ ಎಂದು ರೋಹಿತ್ ಸಂದೇಶ ಬರೆದುಕೊಂಡಿದ್ದರು. ಪ್ರತೀ ಬಾರಿ ಪತಿಯೊಂದಿಗೆ ವಿದೇಶ ಪ್ರವಾಸಗಳಲ್ಲಿ ಜತೆಯಾಗುವ ರಿತಿಕಾ ಈ ಬಾರಿ ತುಂಬು ಗರ್ಭಿಣಿಯಾಗಿದ್ದರಿಂದ ಆಸ್ಟ್ರೇಲಿಯಾಕ್ಕೆ ತೆರಳಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಯಾಂಕ್ ಅಗರ್ವಾಲ್ ಸಹಾಯಕ್ಕೆ ಬಂದ ವಿರಾಟ್ ಕೊಹ್ಲಿ