Publish Date: Fri, 22 Jun 2018 (09:13 IST)
Updated Date: Fri, 22 Jun 2018 (09:14 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ?
ಯೋ ಯೋ ಫಿಟ್ನೆಸ್ ಟೆಸ್ಟ್ ಗೆ ರೋಹಿತ್ ಶರ್ಮಾ ಎಲ್ಲರೊಂದಿಗೆ ಹಾಜರಾಗದೇ ನಿಧಾನ ಮಾಡಿದ್ದನ್ನು ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ರೋಹಿತ್ ಫಿಟ್ ಆಗಿಲ್ಲ, ಅದಕ್ಕೇ ನಿಧಾನವಾಗಿ ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಿದ್ದಾರೆ ಎಂದರೆ ಇನ್ನು ಕೆಲವು ಮಾಧ್ಯಮಗಳು ಅವರು ಬೇರೆಲ್ಲಿಯೋ ಸುತ್ತಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದವು.
ಇದರಿಂದ ಸಿಟ್ಟಿಗೆದ್ದಿರುವ ರೋಹಿತ್ ಯೋ ಯೋ ಟೆಸ್ಟ್ ಪಾಸ್ ಆದ ಬಳಿಕ ಟ್ವಿಟರ್ ನಲ್ಲಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ. ನಾನು ಎಲ್ಲಿಗೆ ಹೋಗುತ್ತೇನೆ ಎನ್ನುವುದು ನಿಮಗೆ ಅಗತ್ಯವಿಲ್ಲ. ಎಲ್ಲೇ ಹೋದರೂ ನಿಯಮಗಳಿಗೆ ಅನುಸಾರವಾಗಿಯೇ ನಡೆದುಕೊಳ್ಳುತ್ತೇನೆ. ಸ್ವಲ್ಪ ನೈಜ ಸುದ್ದಿಗಳತ್ತ ಗಮನಕೊಡೋಣ. ಕೆಲವು ಚಾನೆಲ್ ಗಳಿಗೆ ವಿಶೇಷವಾಗಿ ನನಗೆ ಯೋ ಯೋ ಟೆಸ್ಟ್ ಗೆ ಹಾಜರಾಗಲು ಒಂದೇ ದಿನ ಅವಕಾಶವಿತ್ತು ಮತ್ತು ಅದು ಇಂದಾಗಿತ್ತು. ಯಾವುದೇ ಸುದ್ದಿ ಮಾಡುವಾಗ ನಿಜಾಂಶ ತಿಳಿದು ಮಾಡಿ’ ಎಂದು ರೋಹಿತ್ ಸಿಟ್ಟಿನಿಂದಲೇ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.