Publish Date: Wed, 20 Jun 2018 (09:14 IST)
Updated Date: Wed, 20 Jun 2018 (09:15 IST)
ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತು ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಪ್ರತೀ ತಿಂಗಳು ಎಷ್ಟು ವೇತನ ಪಡೆಯುತ್ತಾರೆ ಗೊತ್ತಾ?
ಬಿಸಿಸಿಐ ತನ್ನ ಕೋಚ್, ಕ್ರಿಕೆಟಿಗರಿಗೆ ಚೆನ್ನಾಗಿಯೇ ವೇತನ ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಕೋಚ್ ನೇಮಕ ಸಂದರ್ಭದಲ್ಲಿಯೇ ಅವರ ವೇತನವನ್ನೂ ನಿಗದಿ ಮಾಡಲಾಗುತ್ತದೆ.
ಇದೀಗ ಬಿಸಿಸಿಐ ತನ್ನ ಕೋಚ್ ಗಳ ಮಾಸಿಕ ವೇತನ ಬಹಿರಂಗಪಡಿಸಿದ್ದು, ರವಿಶಾಸ್ತ್ರಿ ತಿಂಗಳಿಗೆ 63 ಲಕ್ಷ ರೂ. ಮತ್ತು ರಾಹುಲ್ ದ್ರಾವಿಡ್ 40.5 ಲಕ್ಷ ರೂ. ವೇತನ ಪಡೆಯುತ್ತಿರುವುದಾಗಿ ಬಹಿರಂಗಪಡಿಸಿದೆ.
ರಾಹುಲ್ ದ್ರಾವಿಡ್ ವಾರ್ಷಿಕ ವೇತನ 4.86 ಕೋಟಿ ರೂ. ರವಿಶಾಸ್ತ್ರಿ ಮೂರು ತಿಂಗಳ ವೇತನ 1.89 ಕೋಟಿ ರೂ. ಎಂದು ನಿಗದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.