Select Your Language

Notifications

webdunia
webdunia
webdunia
webdunia

ತನಗೆ ಜೀವ ಬೆದರಿಕೆ ಇದೆ ಎಂದ ಧೋನಿ ಪತ್ನಿ ಸಾಕ್ಷಿ

ತನಗೆ ಜೀವ ಬೆದರಿಕೆ ಇದೆ ಎಂದ ಧೋನಿ ಪತ್ನಿ ಸಾಕ್ಷಿ
ರಾಂಚಿ , ಗುರುವಾರ, 21 ಜೂನ್ 2018 (09:05 IST)
ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಪತ್ನಿ ಸಾಕ್ಷಿ ಸಿಂಗ್ ರಾವತ್ ತನಗೆ ಜೀವ ಬೆದರಿಕೆ ಇದೆ ಎಂದಿದ್ದು, ಜೀವ ರಕ್ಷಣೆಗೆ ಪಿಸ್ತೂಲ್ ಅಥವಾ ರಿವಾಲ್ವರ್ ಇಟ್ಟುಕೊಳ್ಳಲು ಅನುಮತಿ ಕೋರಿದ್ದಾರೆ.

ಶಸ್ತ್ರಾಸ್ತ್ರ ಪರವಾನಗಿ ನೀಡಲು ಸಾಕ್ಷಿ ಧೋನಿ ಮನವಿ ಸಲ್ಲಿಸಿದ್ದಾರೆ. ತಾನು ಹೆಚ್ಚಿನ ಸಮಯ ಮನೆಯಲ್ಲಿ ಒಬ್ಬಂಟಿಯಾಗಿರುತ್ತೇನೆ. ಮನೆಯಿಂದ ಹೊರಗಡೆ ಹೋಗುವಾಗಲೂ ಹೆಚ್ಚಾಗಿ ಒಂಟಿಯಾಗಿರುತ್ತೇನೆ. ಈ ಸಂದರ್ಭದಲ್ಲಿ ತನ್ನ ಜೀವಕ್ಕೆ ಅಪಾಯವಾಗಬಹುದು ಎಂದು ಸಾಕ್ಷಿ ಧೋನಿ ಮನವಿಯಲ್ಲಿ ಕಾರಣ ತಿಳಿಸಿದ್ದಾರೆ.

ಕನಿಷ್ಠ ಪಕ್ಷ 0.32 ರಿವಾಲ್ವರ್ ಇಟ್ಟುಕೊಳ್ಳಲಾದರೂ ಅನುಮತಿ ಕೊಡಿ ಎಂದು ಸಾಕ್ಷಿ ಮನವಿಯಲ್ಲಿ ಕೇಳಿಕೊಂಡಿದ್ದಾರೆ. 2010 ರಲ್ಲಿ ಧೋನಿಗೆ ಶಸ್ತ್ರಾಸ್ತ್ರ ಪರವಾನಗಿ ಸಿಕ್ಕಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಾಂಡ್ಯ ಜತೆ ಹೊರಗಡೆ ಸುತ್ತಾಡುವುದೇ ಕೆಎಲ್ ರಾಹುಲ್ ಗೆ ಭಯವಂತೆ!