Publish Date: Tue, 05 Jul 2022 (09:10 IST)
Updated Date: Tue, 05 Jul 2022 (09:25 IST)
ಲಂಡನ್: ಕೊರೋನಾ ನೆಗೆಟಿವ್ ವರದಿ ಬಂದ ಬೆನ್ನಲ್ಲೇ ಟೀಂ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ನೆಟ್ ಪ್ರಾಕ್ಟೀಸ್ ಶುರು ಮಾಡಿದ್ದಾರೆ.
ರೋಹಿತ್ ಶರ್ಮಾ ಕೊರೋನಾ ಸೋಂಕಿಗೊಳಗಾಗಿದ್ದರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿದು ಐಸೋಲೇಟ್ ಆಗಿದ್ದರು. ಇದೀಗ ನೆಗೆಟಿವ್ ವರದಿ ಬಂದ ಹಿನ್ನಲೆಯಲ್ಲಿ ಅಭ್ಯಾಸಕ್ಕೆ ಮರಳಿದ್ದಾರೆ.
ಜುಲೈ 7 ರಿಂದ ಟಿ20 ಸರಣಿ ಆರಂಭವಾಗಲಿದ್ದು, ಈ ಸರಣಿಗೆ ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ. ಇದಾದ ಬಳಿಕ ಏಕದಿನ ಸರಣಿ ನಡೆಯಲಿದೆ.