Publish Date: Tue, 05 Jul 2022 (08:30 IST)
Updated Date: Tue, 05 Jul 2022 (09:08 IST)
ನವದೆಹಲಿ: ಶಸ್ತ್ರಚಿಕಿತ್ಸೆಗೆಂದು ಜರ್ಮನಿಗೆ ತೆರಳಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಜೊತೆ ಗೆಳತಿ ಅಥಿಯಾ ಕೂಡಾ ತೆರಳಿದ್ದರು.
ಇದೀಗ ರಾಹುಲ್ ಜರ್ಮನಿಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಅದಾದ ಬಳಿಕ ಭಾರತಕ್ಕೆ ಮರಳಿ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಜರ್ಮನಿಯಲ್ಲಿರುವ ರಾಹುಲ್-ಅಥಿಯಾ ಜೊತೆ ಮತ್ತೊಬ್ಬ ಗೆಳತಿ ರಂಜನಾ ರಂಜನ್ ಕೂಡಾ ಸೇರಿಕೊಂಡಿದ್ದಾರೆ. ಮೂವರೂ ಜರ್ಮನಿಯಲ್ಲಿ ಚಿಲ್ ಔಟ್ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.