Publish Date: Mon, 04 Jul 2022 (20:17 IST)
Updated Date: Mon, 04 Jul 2022 (20:18 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 378 ರನ್ ಗಳ ಗುರಿ ಪಡೆದಿರುವ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಆರಂಭ ಪಡೆದಿದೆ.
ಇದೀಗ ಚಹಾ ವಿರಾಮದ ವೇಳೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ. ಆರಂಭಿಕ ಜ್ಯಾಕ್ ಕ್ರಾಲೇ 46 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನೊಂದೆಡೆ 56 ರನ್ ಗಳಿಸಿರುವ ಅಲೆಕ್ಸ್ ಲೀಸ್ ಮತ್ತು ಖಾತೆ ತೆರೆಯದೇ ಒಲಿ ಪೋಪ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಭಾರತ ನೀಡಿರುವ ಗೆಲುವಿನ ಗುರಿ ತಲುಪಲು 271 ರನ್ ಗಳಿಸಬೇಕಿದೆ. ಸದ್ಯಕ್ಕೆ ಟೀಂ ಇಂಡಿಯಾಗೆ ತುರ್ತಾಗಿ ವಿಕೆಟ್ ಗಳಿಸುವ ಅಗತ್ಯವಿದೆ. ಇಲ್ಲದೇ ಹೋದರೆ ಅಪಾಯ ಕಟ್ಟಿಟ್ಟಬುತ್ತಿ.
ಇದಕ್ಕೂ ಮೊದಲು ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 245 ರನ್ ಗಳಿಗೆ ಆಲೌಟ್ ಆಗಿತ್ತು.