Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಟೆಸ್ಟ್: ಕೈಗೆ ಬಂದ ತುತ್ತು ಜಾರುವ ಭೀತಿಯಲ್ಲಿ ಟೀಂ ಇಂಡಿಯಾ

ಭಾರತ-ಇಂಗ್ಲೆಂಡ್ ಟೆಸ್ಟ್: ಕೈಗೆ ಬಂದ ತುತ್ತು ಜಾರುವ ಭೀತಿಯಲ್ಲಿ ಟೀಂ ಇಂಡಿಯಾ
ಬರ್ಮಿಂಗ್ ಹ್ಯಾಮ್ , ಮಂಗಳವಾರ, 5 ಜುಲೈ 2022 (08:20 IST)
ಬರ್ಮಿಂಗ್ ಹ್ಯಾಮ್: ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ನಲ್ಲಿ ಗೆಲುವು ಇನ್ನೇನು ಸನಿಹದಲ್ಲೇ ಇದೆ ಎನ್ನುವಾಗ ಟೀಂ ಇಂಡಿಯಾಗೆ ಈಗ ಸೋಲಿನ ಭೀತಿ ಕಾಡಿದೆ.

ನಿನ್ನೆಯ ದಿನದಂತ್ಯಕ್ಕೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದೆ. ಗೆಲುವಿನ ಗುರಿ ತಲುಪಲು ಇಂಗ್ಲೆಂಡ್ ಗೆ ಈಗ 119 ರನ್ ಗಳಿಸಿದರೆ ಸಾಕು. ಜೋ ರೂಟ್-ಜಾನಿ ಬೇರ್ ಸ್ಟೋ 150 ರನ್ ಗಳ ಜೊತೆಯಾಟವಾಡಿದ್ದಾರೆ. ರೂಟ್ ಅಜೇಯ 76, ಜಾನಿ ಬೇರ್ ಸ್ಟೋ ಅಜೇಯ 72 ರನ್ ಗಳಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ ಬೌಲರ್ ಗಳು ನಿನ್ನೆ ಅನುಭವಿ ಬ್ಯಾಟಿಗರ ಮುಂದೆ ಮಂಕು ಬಡಿದಂತಾದರು. ಇದೀಗ ಇಂದು ಅಂತಿಮ ದಿನದಾಟ ಪೂರ್ತಿ ಬಾಕಿಯಿದ್ದು, ಗೆಲುವಿನ ಕನಸಿನಲ್ಲಿದ್ದ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾಕ್ಕೆ ಬೇಕಾಗಿದೆ ವಿಕೆಟ್