ಮುಂಬೈ: ಹಿಟ್ ಮ್ಯಾನ್ ರೋಹಿತ್ ಶರ್ಮಾ ಸೆಲ್ಫೀ, ಆಟೋಗ್ರಾಫ್ ಗಾಗಿ ಬರುವ ಅಭಿಮಾನಿಗಳನ್ನು ಎಂದಿಗೂ ನಿರಾಸೆ ಮಾಡಲ್ಲ. ಆದರೆ ಇಲ್ಲೊಬ್ಬ ಅಭಿಮಾನಿಯ ಬೇಡಿಕೆ ಕೇಳಿ ಶಾಕ್ ಆಗಿದ್ದಾರೆ.
ಅಷ್ಟಕ್ಕೂ ಆ ಅಭಿಮಾನಿ ಕೇಳಿದ್ದೇನು ಗೊತ್ತಾ?! ಐಪಿಎಲ್ ಪಂದ್ಯದ ವೇಳೆ ತಮ್ಮ ಟೀಂ ಬಸ್ ನತ್ತ ತೆರಳುತ್ತಿದ್ದ ರೋಹಿತ್ ಗೆ ಪುರುಷ ಅಭಿಮಾನಿಯೊಬ್ಬರು ಕಿಸ್ ಮಾಡಲು ಬೇಡಿಕೆಯಿಟ್ಟಿದ್ದಾರೆ. ಹೆಚ್ಚು ಕಡಿಮೆ ತುಟಿ ತಂದಿದ್ದ ಅಭಿಮಾನಿಯನ್ನು ನೋಡಿ ಅವರಿಗೆ ಶಾಕ್ ಆಗಿದೆ. ಹೀಗಾಗಿ ಅತ್ತ ತಳ್ಳಿ ಬಸ್ ಏರಿದ್ದಾರೆ.
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಹಿಟ್ ಮ್ಯಾನ್ ಮೇಲೆ ಅಭಿಮಾನಿಗಳಿಗಿರುವ ಕ್ರೇಜ್.