ಬೆಂಗಳೂರು: ಐಪಿಎಲ್ 2022 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ.
ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದರೆ ಮಾತ್ರ ಪ್ಲೇ ಆಫ್ ಗೆ ಅವಕಾಶ ದೊರೆಯಲಿದೆ. ಇಲ್ಲದೇ ಹೋದರೆ ಉಳಿದ ತಂಡಗಳ ಫಲಿತಾಂಶದ ಮೇಲೆ ಕಾಯುತ್ತಾ ಕೂರಬೇಕು. ಹಾಗಿದ್ದರೂ ಪ್ಲೇ ಆಫ್ ಅವಕಾಶ ಸಿಗುತ್ತದೆ ಎಂದು ಹೇಳಲಾಗದು. ಸದ್ಯಕ್ಕೆ ಭರ್ಜರಿ ಫಾರ್ಮ್ ನಲ್ಲಿರುವ ಆರ್ ಸಿಬಿ ಬ್ಯಾಟಿಗರು ಗುಜರಾತ್ ಮಣಿಸುವ ವಿಶ್ವಾಸದಲ್ಲಿದ್ದಾರೆ.
ಇತ್ತ ಗುಜರಾತ್ ಟೈಟನ್ಸ್ ಗೆ ಇದು ಲೀಗ್ ಹಂತದಲ್ಲಿ ಔಪಚಾರಿಕ ಪಂದ್ಯವಷ್ಟೇ. ಈಗಾಗಲೇ ಪ್ಲೇ ಆಫ್ ಗೇರಿರುವ ಗುಜರಾತ್ ಇಂದು ಸೋತರೂ, ಗೆದ್ದರೂ ಅದರ ಮುಂದಿನ ಹಂತಕ್ಕೆ ಯಾವುದೇ ಪರಿಣಾಮ ಬೀರದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.