Publish Date: Sun, 06 Oct 2024 (18:10 IST)
Updated Date: Sun, 06 Oct 2024 (18:12 IST)
ದುಬೈ; ಟೀಂ ಇಂಡಿಯಾ ಇತ್ತೀಚೆಗೆ ಟಿ20 ವಿಶ್ವಕಪ್ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಲು ಪ್ಲ್ಯಾನ್ ಮಾಡಿದ್ದು ನಿಜವಾಗಿ ಯಾರು ಎಂಬುದನ್ನು ನಾಯಕ ರೋಹಿತ್ ಶರ್ಮಾ ರಿವೀಲ್ ಮಾಡಿದ್ದಾರೆ.
ಟಿ20 ವಿಶ್ವಕಪ್ ಫೈನಲ್ ಗೆಲುವಿಗೆ ಎಲ್ಲರೂ ರೋಹಿತ್ ಮಾಸ್ಟರ್ ಪ್ಲ್ಯಾನ್, ಸೂರ್ಯಕುಮಾರ್ ಯಾದವ್ ಕ್ಯಾಚ್, ಬುಮ್ರಾ ಬೌಲಿಂಗ್ ನ್ನಷ್ಟೇ ಹೊಗಳುತ್ತಾರೆ. ಆದರೆ ನಿಜವಾಗಿ ಈ ಫೈನಲ್ ಗೆಲುವಿಗೆ ಪ್ಲ್ಯಾನ್ ಮಾಡಿದ್ದು ನಾನಲ್ಲ ಎಂದು ರೋಹಿತ್ ಶರ್ಮಾ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಫೈನಲ್ ನಲ್ಲಿ ಗೆಲ್ಲಲು ನಿಜವಾಗಿ ಪ್ಲ್ಯಾನ್ ಮಾಡಿದ್ದು ರಿಷಭ್ ಪಂತ್. ಯಾಕೆಂದರೆ ಆತನಿಗೆ ಆಗ ಮೊಣಕಾಲಿನಲ್ಲಿ ಸ್ವಲ್ಪ ನೋವಿತ್ತು. ಕಾಲಿಗೆ ಬ್ಯಾಂಡೇಜ್ ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡ. ಆಗ 30 ಬಾಲ್ ನಲ್ಲಿ 30 ರನ್ ಎಂಬ ಪರಿಸ್ಥಿತಿಯಿತ್ತು.
ಪಂತ್ ಬ್ಯಾಂಡೇಜ್ ಮಾಡಿಕೊಳ್ಳಲು ಸಮಯ ತೆಗೆದುಕೊಂಡಿದ್ದರಿಂದ ಆಟ ಅಡಚಣೆಯಿಂದಾಗಿ ನಿಧಾನವಾಯಿತು. ಪಂತ್ ಬುದ್ಧಿವಂತಿಕೆಯಿಂದ ಪಂದ್ಯದ ದಿಕ್ಕು ಬದಲಾಯಿತು. ಇದೂ ಕೂಡಾ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿತು ಎಂದು ರೋಹಿತ್ ಹೇಳಿಕೊಂಡಿದ್ದಾರೆ.
Krishnaveni K
Publish Date: Sun, 06 Oct 2024 (18:10 IST)
Updated Date: Sun, 06 Oct 2024 (18:12 IST)