Select Your Language

Notifications

webdunia
webdunia
webdunia
webdunia

IND vs BAN Test: 3 ಓವರ್ ಗಳಲ್ಲೇ ಅರ್ಧಶತಕದ ದಾಖಲೆ, ಎಲ್ಲಾ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಕೃಪೆ

Rohit Sharma-Yashasvi Jaiswal

Krishnaveni K

ಕಾನ್ಪುರ , ಸೋಮವಾರ, 30 ಸೆಪ್ಟಂಬರ್ 2024 (13:53 IST)
Photo Credit: X
ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರತ ಸ್ಪೋಟಕ ಆರಂಭ ಪಡೆದಿದೆ. ಈ ಮೂಲಕ ಹೊಸ ದಾಖಲೆಯನ್ನೂ ಮಾಡಿದೆ.

ಇದಕ್ಕೆ ಮೊದಲ ಇನಿಂಗ್ಸ್ ನಲ್ಲಿ ಬಾಂಗ್ಲಾದೇಶ 233 ರನ್ ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಈಗಾಗಲೇ ಮೂರು ದಿನಗಳು ಮಳೆಯ ಅಡಚಣೆಯಿಂದಾಗಿ ರದ್ದಾಗಿದೆ. ಇದೀಗ ನಾಲ್ಕನೇ ದಿನವಾಗಿದ್ದು, ಎರಡೇ ದಿನದಲ್ಲಿ ಫಲಿತಾಂಶ ಪಡೆಯಲು ಭಾರತ ತಂಡ ಹಾತೊರೆಯುತ್ತಿದೆ.

ಈ ಕಾರಣಕ್ಕೆ ತನ್ನ ಸರದಿ ಬಂದಾಗ ಭಾರತೀಯ ಬ್ಯಾಟಿಗರು ಬಿರುಸಿನ ಆಟಕ್ಕೆ ಕೈಹಾಕಿದರು. ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ್ದರಿಂದ ಭಾರತ 3 ಓವರ್ ಗಳಲ್ಲೇ ಅರ್ಧಶತಕ ಪೂರೈಸಿತು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 50 ಪ್ಲಸ್ ರನ್ ಮಾಡಿದ ದಾಖಲೆ ಮಾಡಿತು.

ಆದರೆ 3.4 ನೇ ಓವರ್ ನಲ್ಲಿ ರೋಹಿತ್ ವಿರುದ್ಧ ಅಂಪಾಯರ್ ಎಲ್ ಬಿಡಬ್ಲ್ಯು ತೀರ್ಪು ನೀಡಿದರು. ಆದರೆ ಡಿಆರ್ ಎಸ್ ಪಡೆದು ರೋಹಿತ್ ಬಚಾವ್ ಆಗಿದ್ದರು. ಆಗ ಅವರ ಮುಖದಲ್ಲಿದ್ದ ಅಗ್ರೆಷನ್ ನೋಡಿದರೇ ಇಂದು ಭಾರತದ ಇನಿಂಗ್ಸ್ ಹೇಗಿರಬೇಕು ಎಂದು ಕಲ್ಪನೆ ಮಾಡಿದ್ದು ಸ್ಪಷ್ಟವಾಗಿತ್ತು. ಆದರೆ ವಿಪರ್ಯಾಸವೆಂದರೆ ಮರು ಎಸೆತದಲ್ಲೇ ಅವರು ಮಿರಾಜ್ ಬೌಲಿಂಗ್ ನಲ್ಲಿ ಬೌಲ್ಡ್ ಔಟ್ ಆಗಿ ನಿರ್ಗಮಿಸಿದರು. ಒಟ್ಟು 11 ಎಸೆತ ಎದುರಿಸಿದ್ದ ರೋಹಿತ್ 1 ಸಿಕ್ಸರ್, 6 ಬೌಂಡರಿ ಸೇರಿತ್ತು. ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿದ್ದ ಭಾರತ 176 ರನ್ ಗಳ ಹಿನ್ನಡೆಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs BAN test: ಬಾಲ್ ಹಿಡಿಯಕ್ಕೂ ಲಾಯಕ್ಕಿಲ್ಲದವನು, ಕೆಎಲ್ ರಾಹುಲ್ ಮೇಲೆ ರೋಹಿತ್, ಸಿರಾಜ್ ಸಿಟ್ಟು