Select Your Language

Notifications

webdunia
webdunia
webdunia
webdunia

ಐಪಿಎಲ್ ಗಿಂತ ದೇಶವೇ ಮುಖ್ಯ ಎನ್ನುತ್ತಿರುವ ರೋಹಿತ್ ಶರ್ಮಾ!

ಐಪಿಎಲ್ ಗಿಂತ ದೇಶವೇ ಮುಖ್ಯ ಎನ್ನುತ್ತಿರುವ ರೋಹಿತ್ ಶರ್ಮಾ!
ದುಬೈ , ಗುರುವಾರ, 23 ಸೆಪ್ಟಂಬರ್ 2021 (09:30 IST)
ದುಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಚೆನ್ನೈ ವಿರುದ್ಧದ ಮೊದಲ ಐಪಿಎಲ್ ಪಂದ್ಯದಲ್ಲಿ ಆಡಿರಲಿಲ್ಲ. ಇದಕ್ಕೆ ಕಾರಣವೂ ಕುತೂಹಲಕಾರಿಯಾಗಿದೆ.


ರೋಹಿತ್ ಗೆ ಮೊದಲ ಪಂದ್ಯಕ್ಕೆ ಮೊದಲು ಮೊಣಕಾಲಿನ ಕೊಂಚ ನೋವು ಕಾಣಿಸಿಕೊಂಡಿತ್ತು. ಅದೇನೂ ಅಂಥಾ ಗಂಭೀರ ಗಾಯವಾಗಿರಲಿಲ್ಲ. ಆದರೆ ಈಗ ಐಪಿಎಲ್ ನಲ್ಲಿ ಆಡುವುದಕ್ಕಿಂತ ಮುಂದೆ ವಿಶ್ವಕಪ್ ನಲ್ಲಿ ದೇಶವನ್ನು ಪ್ರತಿನಿಧಿಸುವುದೇ ಮುಖ್ಯ ಎಂಬ ಕಾರಣಕ್ಕೆ ಅವರು ರಿಸ್ಕ್ ತೆಗೆದುಕೊಂಡಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಐಪಿಎಲ್ ಮುಗಿದ ತಕ್ಷಣವೇ ಯುಎಇನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ವಿಶ್ವಕಪ್ ನಲ್ಲಿ ದೇಶವನ್ನು ಪ್ರತಿನಿಧಿಸುವುದು ಎಲ್ಲಾ ಕ್ರಿಕೆಟಿಗರ ಕನಸು. ಆ ಕನಸು ಮಿಸ್ ಮಾಡಿಕೊಳ‍್ಳಲು ಇಷ್ಟವಿಲ್ಲದೇ ರೋಹಿತ್ ಗಾಯವನ್ನು ಹಗುರವಾಗಿ ಪರಿಗಣಿಸದೇ ವಿಶ್ರಾಂತಿ ತೆಗೆದುಕೊಂಡರು ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಮುಂಬೈಗೆ ಇಂದು ಕೆಕೆಆರ್ ಸವಾಲು, ರೋಹಿತ್ ಆಗಮನ ಸಾಧ್ಯಿತೆ