ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕನೇ ಟಿ20 ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಖುಷಿಕೊಡುವ ಕೆಲಸ ಮಾಡಿದ್ದಾರೆ.
ಭಾರತೀಯ ಕ್ರಿಕೆಟಿಗರನ್ನು ನೋಡಲೆಂದೇ ಜನ ಮೈದಾನಕ್ಕೆ ಬರುತ್ತಾರೆ. ಹೀಗಾಗಿ ತಮಗಾಗಿ ಬಂದ ಅಭಿಮಾನಿಗಳನ್ನು ನಿರಾಸೆ ಪಡಿಸದೇ ರೋಹಿತ್ ಅವರ ಬಳಿ ತೆರಳಿ ಅಭಿನಂದನೆ ಸ್ವೀಕರಿಸಿದ್ದಾರೆ.
ಪಂದ್ಯದ ಬಳಿಕ ಸಾಲುಗಟ್ಟಿ ನಿಂತಿದ್ದ ಅಭಿಮಾನಿಗಳ ಬಳಿ ತೆರಳಿ ಹಸ್ತಾಲಾಘವ ನೀಡಿದ್ದಾರೆ. ಈ ವೇಳೆ ಕೆಲವರು ಸೆಲ್ಫೀ ತೆಗೆಯಲೂ ಪ್ರಯತ್ನಿಸಿದ್ದಾರೆ.