ಅಡಿಲೇಡ್: ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಸೋತು ಟಿ20 ವಿಶ್ವಕಪ್ ನಿಂದ ಹೊರಬಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತೀವ್ರ ಹತಾಶೆಗೊಳಗಾದರು.
ಟೀಂ ಇಂಡಿಯಾ ಸೋಲಿನ ಆಘಾತದಿಂದ ರೋಹಿತ್ ಡಗ್ ಔಟ್ ನಲ್ಲಿ ಕೆಲ ಹೊತ್ತು ಸಪ್ಪೆ ಮುಖ ಮಾಡಿ ಕೂತಿದ್ದರು. ಆಗ ಬಳಿ ಬಂದ ಕೋಚ್ ರಾಹುಲ್ ದ್ರಾವಿಡ್ ರೋಹಿತ್ ಬೆನ್ನು ತಟ್ಟಿ ಸಮಾಧಾನಿಸಿದರು.
ಇದರಿಂದಾಗಿ ರೋಹಿತ್ ದುಃಖದ ಕಟ್ಟೆಯೊಡೆದಿತ್ತು. ಕ್ಯಾಮರಾ ಕಣ್ಣು ತಮ್ಮ ಮೇಲಿದ್ದರೂ ಗಳ ಗಳನೆ ಅತ್ತು ದುಃಖ ಹೊರಹಾಕಿದರು. ಇತರ ಭಾರತೀಯ ಕ್ರಿಕೆಟಿಗರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ.