Publish Date: Thu, 06 Aug 2026 (10:32 IST)
Updated Date: Thu, 06 Aug 2026 (10:36 IST)
ಮುಂಬೈ: 2027 ರ ಏಕದಿನ ವಿಶ್ವಕಪ್ ಗೆ ರೋಹಿತ್ ಶರ್ಮಾ ನಮ್ಮ ಯೋಜನೆಯಲ್ಲಿಲ್ಲ ಎಂದು ಹೇಳಿಕೊಳ್ಳುತ್ತಿದ್ದ ಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಈಗ ತಾನೇ ಹೊರನಡೆಯುವ ಪರಿಸ್ಥಿತಿ.. ಹೀಗಂತ ರೋಹಿತ್ ಅಭಿಮಾನಿಗಳು ಈಗ ಟ್ರೋಲ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದ ವೇಳೆ ರೋಹಿತ್ ಶರ್ಮಾ ನಿವೃತ್ತಿಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಇದಕ್ಕೆ ಅಜಿತ್ ಅಗರ್ಕರ್ ಅವರು ಸೃಷ್ಟಿಸಿದ ಗೊಂದಲವೇ ಕಾರಣ ಎಂದು ಬಿಸಿಸಿಐ ಅಸಮಾಧಾನಗೊಂಡಿದೆ ಎನ್ನಲಾಗಿದೆ.
ಅಜಿತ್ ಅಗರ್ಕರ್ ಗೆ ಮುಂಬರುವ ಏಕದಿನ ವಿಶ್ವಕಪ್ ಗೆ ರೋಹಿತ್ ಶರ್ಮಾ ಬದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಬೇಕು ಎಂದಿತ್ತು. ರೋಹಿತ್ ಶರ್ಮಾರನ್ನು ಆಯ್ಕೆ ಮಾಡಿದರೆ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅಜಿತ್ ಅಗರ್ಕರ್ ಅಭಿಪ್ರಾಯವಾಗಿತ್ತು.
ಅಜಿತ್ ಅಗರ್ಕರ್ ಈ ಗೊಂದಲದಿಂದಾಗಿ ರೋಹಿತ್ ಶರ್ಮಾ ನಿವೃತ್ತಿಯ ಬಗ್ಗೆ ರೂಮರ್ ಹರಡಿತ್ತು. ಇದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ಈ ವಿಚಾರ ಅಜಿತ್ ಅಗರ್ಕರ್ ವರ್ಸಸ್ ಬಿಸಿಸಿಐ ಆಗಿ ಮಾರ್ಪಟ್ಟಿದೆ. ಇದರ ಬೆನ್ನಲ್ಲೇ ಈಗ ಸೆಪ್ಟೆಂಬರ್ ನಲ್ಲಿ ಅಜಿತ್ ಅಗರ್ಕರ್ ಅವಧಿ ಮುಕ್ತಾಯವಾಗಲಿದ್ದು ಅದರ ನಂತರ ಅವರನ್ನು ಮುಂದುವರಿಸುವ ಇರಾದೆ ಬಿಸಿಸಿಐಗಿಲ್ಲ ಎನ್ನಲಾಗುತ್ತಿದೆ. ಅಜಿತ್ ಅಗರ್ಕರ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಹೆಸರು ಕೇಳಿಬರುತ್ತಿದೆ.
ಇದರ ಬೆನ್ನಲ್ಲೇ ಈಗ ರೋಹಿತ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ರೋಹಿತ್ ಹೊರಹಾಕುತ್ತೇನೆ ಎಂದು ಬಂದವರು ಈಗ ತಾನೇ ಹೊರನಡೆಯುವ ಪರಿಸ್ಥಿತಿ ಎದುರಾಗಿದೆ ಎಂದು ಕಾಲೆಳೆಯುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ