Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಹೊಸ ವಿಶ್ವದಾಖಲೆ ಮಾಡಲು ಕಾಯುತ್ತಿರುವ ರೋಹಿತ್ ಶರ್ಮಾ

ಬೆಂಗಳೂರಲ್ಲಿ ಹೊಸ ವಿಶ್ವದಾಖಲೆ ಮಾಡಲು ಕಾಯುತ್ತಿರುವ ರೋಹಿತ್ ಶರ್ಮಾ
ಬೆಂಗಳೂರು , ಭಾನುವಾರ, 22 ಸೆಪ್ಟಂಬರ್ 2019 (09:18 IST)
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಭಾರತ ಮತ್ತು ದ.ಆಫ್ರಿಕಾ ನಡುವಿನ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ವಿಶ್ವದಾಖಲೆ ಮಾಡಲು ಕೇವಲ 8 ರನ್ ದೂರದಲ್ಲಿದ್ದಾರೆ.


ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಸ್ಕೋರರ್ ಎಂಬ ದಾಖಲೆ ಸದ್ಯಕ್ಕೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 2441 ರನ್ ಗಳಿಸಿದ್ದಾರೆ. ಆದರೆ ರೋಹಿತ್ 2434 ರನ್ ಗಳಿಸಿ ಕೆಲವೇ ಹೆಜ್ಜೆ ಹಿಂದಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿಯುವ ರೋಹಿತ್ 8 ರನ್ ಗಳಿಸಿದರೆ ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ.

ಆದರೆ ಕೊಹ್ಲಿ ಕೂಡಾ ಕೆಲವೇ ಕ್ಷಣಗಳಲ್ಲಿ ರೋಹಿತ್ ರನ್ನು ಹಿಂದಿಕ್ಕಿ ಮತ್ತೆ ನಂ.1 ಆಗುವ  ಅವಕಾಶ ಹೊಂದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆಡಲಿಳಿಯುವ ಕೊಹ್ಲಿ ಈ ದಾಖಲೆ ಮುರಿಯಬಹುದಾಗಿದೆ. ಆದರೆ ಇಂದು ಯಾರು ಅಂತಿಮವಾಗಿ ನಂ.1 ಆಗಿ ಇನಿಂಗ್ಸ್ ಕೊನೆಗೊಳಿಸುತ್ತಾರೆ ಕಾದ ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಎಲ್ಲಿ? ರವಿಶಾಸ್ತ್ರಿ ಎಲ್ಲಿ? ಹೋಲಿಕೆ ಮಾಡಿದ ಬಿಸಿಸಿಐಗೆ ನೆಟ್ಟಿಗರ ತರಾಟೆ