Publish Date: Sat, 21 Sep 2019 (09:08 IST)
Updated Date: Sat, 21 Sep 2019 (09:10 IST)
ಬೆಂಗಳೂರು: ದ.ಆಫ್ರಿಕಾ ವಿರುದ್ಧ ತೃತೀಯ ಟಿ20 ಪಂದ್ಯವಾಡಲು ಬೆಂಗಳೂರಿಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗರು ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಕ್ರಿಕೆಟಿಗರು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದರೆ ಅಚ್ಚರಿಯ ಭೇಟಿ ನೀಡಿದ ಎನ್ ಸಿಎ ಅಧ್ಯಕ್ಷರೂ ಆಗಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾತುಕತೆ ನಡೆಸಿದ್ದಾರೆ.
ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿಯನ್ನು ಭೇಟಿ ಮಾಡಿದ ಸೌಹಾರ್ದಯುತವಾಗಿ ದ್ರಾವಿಡ್ ಮಾತನಾಡುತ್ತಿರುವ ಫೋಟೋಗಳನ್ನು ಪ್ರಕಟಿಸಿರುವ ಬಿಸಿಸಿಐ ಎರಡು ಕ್ರಿಕೆಟ್ ದೈತ್ಯರು ಪರಸ್ಪರ ಭೇಟಿಯಾದಾಗ ಎಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.