Select Your Language

Notifications

webdunia
webdunia
webdunia
webdunia

ಕೊಟ್ಟ ಅವಕಾಶ ಬಳಸದ ರಿಷಬ್ ಪಂತ್ ಮೇಲೆ ತೂಗುಗತ್ತಿ

ಕೊಟ್ಟ ಅವಕಾಶ ಬಳಸದ ರಿಷಬ್ ಪಂತ್ ಮೇಲೆ ತೂಗುಗತ್ತಿ
ಮುಂಬೈ , ಶನಿವಾರ, 21 ಸೆಪ್ಟಂಬರ್ 2019 (09:02 IST)
ಮುಂಬೈ: ಧೋನಿ ನಂತರ ಟೀಂ ಇಂಡಿಯಾಗೆ ಹೊಸ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ತಯಾರು ಮಾಡಲು ರಿಷಬ್ ಪಂತ್ ರನ್ನು ಟೆಸ್ಟ್, ಏಕದಿನ, ಟಿ20 ಪಂದ್ಯಗಳಲ್ಲಿ ಸತತವಾಗಿ ಅವಕಾಶ ನೀಡಿ ಪರೀಕ್ಷಿಸಲಾಗುತ್ತಿದೆ.


ಆದರೆ ರಿಷಬ್ ಮಾತ್ರ ತಮಗೆ ಕೊಟ್ಟ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಂತೆ ತೋರುತ್ತಿಲ್ಲ. ಇದರಿಂದಾಗಿ ಸಾಕಷ್ಟು ಟೀಕೆಗೊಳಗಾಗುತ್ತಿದ್ದಾರೆ. ವಿಕೆಟ್ ಕೀಪಿಂಗ್ ಇರಲಿ, ಬ್ಯಾಟಿಂಗ್ ಇರಲಿ ಎರಡರಲ್ಲೂ ಟೆಸ್ಟ್ ಮತ್ತು ಸೀಮಿತ ಓವರ್ ಪಂದ್ಯಗಳಲ್ಲಿ ವಿಫಲವಾಗಿರುವ ರಿಷಬ್ ಬದಲಿಗೆ ಈಗ ಮತ್ತೊಬ್ಬ ವಿಕೆಟ್ ಕೀಪರ್ ಹುಡುಕಾಟದಲ್ಲಿ ಬಿಸಿಸಿಐ ಇದೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಸದ್ಯಕ್ಕೆ ರಿಷಬ್ ಸ್ಥಾನಕ್ಕೆ ವೃದ್ಧಿಮಾನ್ ಸಹಾ ಆಡಬಹುದಾಗಿದೆ. ಆದರೆ ಸೀಮಿತ ಓವರ್ ಗಳಲ್ಲಿ ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಬ್ಯಾಟಿಂಗ್ ಕೂಡಾ ಮಾಡಬಲ್ಲ ಸಮರ್ಥ ವಿಕೆಟ್ ಕೀಪರ್ ಹುಡುಕಾಟ ನಡೆಸುವ ಅನಿವಾರ್ಯತೆ ಟೀಂ ಇಂಡಿಯಾಗಿದೆ. ರಿಷಬ್ ಹೊರತಾಗಿ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಪಟ್ಟಿಯಲ್ಲಿದ್ದಾರೆ. ಸಂಜು ಈಗಾಗಲೇ ಫಿಟ್ನೆಸ್ ವಿಚಾರದಲ್ಲಿ ಫೈಲ್ ಆದರೂ ಈಗ ಫಿಟ್ನೆಸ್ ಸಾಬೀತುಪಡಿಸಿದರೆ ಉತ್ತಮ ಕ್ಯಾಂಡಿಡೇಟ್ ಆಗಬಲ್ಲರು. ಇದು ರಿಷಬ್ ಮೇಲೆ ಸಹಜವಾಗಿಯೇ ಒತ್ತಡ ತಂದಿದೆ. ದ.ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲೂ ರಿಷಬ್ ವಿಫಲರಾದರೆ ಅವರಿಗೆ  ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಸಾಕು, ಇನ್ನು ನಿವೃತ್ತಿಯಾಗಿ! ಸುನಿಲ್ ಗವಾಸ್ಕರ್ ಸಲಹೆ