Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಇಂದು ಭಾರತ-ದ.ಆಫ್ರಿಕಾ ಟಿ20 ಫೈನಲ್ ಪಂದ್ಯ

ಬೆಂಗಳೂರಿನಲ್ಲಿ ಇಂದು ಭಾರತ-ದ.ಆಫ್ರಿಕಾ ಟಿ20 ಫೈನಲ್ ಪಂದ್ಯ
ಬೆಂಗಳೂರು , ಭಾನುವಾರ, 22 ಸೆಪ್ಟಂಬರ್ 2019 (09:07 IST)
ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ರಿಂದ ಮುನ್ನಡೆ ಸಾಧಿಸಿದೆ.


ಚಿನ್ನಸ್ವಾಮಿ ಮೈದಾನ ಟಿ20 ಪಂದ್ಯಗಳಲ್ಲಿ ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿತ್ತು. ಹೀಗಾಗಿ ಈ ಪಂದ್ಯವೂ ಮತ್ತೊಂದು ರೋಚಕ ಪಂದ್ಯವಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಭಾನುವಾರವಾದ್ದರಿಂದ ವೀಕ್ಷಕರ ಸಂಖ್ಯೆಗೇನೂ ಕೊರತೆಯಿರೋದಿಲ್ಲ. ಹೀಗಾಗಿ ಗ್ಯಾಲರಿ ಫುಲ್ ಆಗೋದು ಗ್ಯಾರಂಟಿ.

ಟೀಂ ಇಂಡಿಯಾಗೆ ಸದ್ಯಕ್ಕಿರುವ ತಲೆನೋವು ರಿಷಬ್ ಪಂತ್. ಪಂತ್ ಫಾರ್ಮ್ ಗೆ ಬಂದರೆ ದೊಡ್ಡ ತಲೆನೋವು ಒಂದು ನಿವಾರಣೆಯಾದಂತೆ. ಬೌಲಿಂಗ್ ವಿಭಾಗದಲ್ಲಿ ಯುವ ಬೌಲರ್ ಗಳು ಅದ್ಭುತ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಆದರೆ ಚಿನ್ನಸ್ವಾಮಿ ಅಂಗಣ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದಂತಿರುತ್ತದೆ. ಹೀಗಾಗಿ ಈ ಪಂದ್ಯದಲ್ಲಿ ಸ್ಪಿನ್ನರ್ ಗಳು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಎಲ್ ಪಂದ್ಯಾವಳಿಯಲ್ಲೂ ವ್ಯಾಪಕ ಬೆಟ್ಟಿಂಗ್?!