Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರ ಬಾಯ್ಬಿಟ್ಟ ಗೆಳೆಯರು!

webdunia
ಮುಂಬೈ , ಮಂಗಳವಾರ, 1 ಮೇ 2018 (07:59 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ನಿನ್ನೆಯಷ್ಟೇ ಜನ್ಮ ದಿನ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರವೊಂದನ್ನು ಗೆಳೆಯರು ಹಂಚಿಕೊಂಡಿದ್ದಾರೆ.

ರೋಹಿತ್ ಶಾಲಾ ದಿನಗಳಲ್ಲಿ ಹೇಗಿದ್ದರು ಎಂದು ಗೆಳೆಯರು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಶಾಲಾ ದಿನಗಳಲ್ಲಿ ರೋಹಿತ್ ಕದ್ದು ಮುಚ್ಚಿ ವಡಾ ಪಾವ್ ತಿನ್ನುತ್ತಿದ್ದ ಘಟನೆಯನ್ನು ಗೆಳೆಯರು ಬಹಿರಂಗಪಡಿಸಿದ್ದಾರೆ.

ಶಾಲಾ ದಿನಗಳಲ್ಲಿ ರೋಹಿತ್ ಕೋಚ್ ಶಿಸ್ತಿನ ಸಿಪಾಯಿ ಆಗಿದ್ದರಂತೆ. ವಡಾ ಪಾವ್ ನಂತಹ ಫಾಸ್ಟ್ ಫುಡ್ ತಿನ್ನಲು ಕೋಚ್ ಬಿಡುತ್ತಿರಲಿಲ್ಲವಂತೆ. ಆದರೆ ರೋಹಿತ್ ಕದ್ದು ಮುಚ್ಚಿ ಯಾರಿಗೂ ಗೊತ್ತಾಗದಂತೆ ವಡಾ ಪಾವ್ ತಿನ್ನುತ್ತಿದ್ದರಂತೆ. ಆದರೂ ರೋಹಿತ್ ಕಠಿಣ ಪರಿಶ್ರಮ ಪಟ್ಟ ಕಾರಣವೇ ಇಂದು ಈ ಮಟ್ಟಕ್ಕೆ ಏರಿದ್ದಾರೆ ಎಂದು ಗೆಳೆಯರು ಹೇಳಿದ್ದಾರೆ.

ಅಷ್ಟೇ ಅಲ್ಲ, ರೋಹಿತ್ ಗೆ ಒಂದು ಸಣ್ಣ ಚೇರ್ ಕೊಟ್ಟರೂ, ಅಷ್ಟೇ ಜಾಗದಲ್ಲಿ ನಿದ್ದೆ ಮಾಡಬಲ್ಲರಂತೆ. ಅಂತಿಪ್ಪ ರೋಹಿತ್ ಏಕದಿನದಲ್ಲಿ ದ್ವಿಶತಕ ಗಳಿಸಿದ್ದಾರೆ, ಟೆಸ್ಟ್ ಕ್ರಿಕೆಟ್ ನಲ್ಲಿ ಬ್ರಿಯಾನ್ ಲಾರಾ ಅವರ 400 ರನ್ ಗಳ ದಾಖಲೆ ಮುರಿಯಲಿ ಎಂದು ಗೆಳೆಯರು ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಬಿಟ್ಟು ಮೀನು ಹಿಡಿಯಲು ಹೊರಟ ಕ್ರಿಸ್ ಗೇಲ್