ರಸ್ತೆ ಅಪಘಾತದಲ್ಲಿ ಬದುಕಿ ಬಂದ ರಿಷಭ್ ಪಂತ್‌ಗೆ ವಿಶ್ವದ ಕ್ರೀಡಾ ಪ್ರಶಸ್ತಿಗೆ ನಾಮ ನಿರ್ದೇಶನ

Sampriya
ಸೋಮವಾರ, 3 ಮಾರ್ಚ್ 2025 (20:22 IST)
Photo Courtesy X
ನವದೆಹಲಿ: ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಅವರು ಲಾರೆಸ್ ವರ್ಲ್ಡ್ ಕಮ್‌ಬ್ಯಾಕ್ ಆಫ್ ದಿ ಇಯರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರು  ಈಚೆಗೆ ಮಾರಣಾಂತಿಕ ಕಾರು ಅಪಘಾತದಿಂದ ಚೇತರಿಸಿಕೊಂಡು ವಾಪಾಸ್ಸಾದ ಕ್ರೀಡಾ ಸ್ಫೂರ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಜಿಮ್ನಾಸ್ಟ್ ರೆಬೆಕಾ ಆಂಡ್ರೇಡ್, ಈಜುಗಾರ ಅರಿಯಾರ್ನೆ ಟಿಟ್ಮಸ್, ಸ್ಕೀ ರೇಸರ್ ಲಾರಾ ಗಟ್-ಬೆಹ್ರಾಮಿ, ಈಜುಗಾರ ಕೇಲೆಬ್ ಡ್ರೆಸೆಲ್ ಮತ್ತು ಮೋಟೋಜಿಪಿ ಸ್ಟಾರ್ ಮಾರ್ಕ್ ಮಾರ್ಕ್ವೆಜ್ ಸೇರಿದಂತೆ ಜಾಗತಿಕ ಕ್ರೀಡಾ ದಂತಕಥೆಗಳಲ್ಲಿ ಪಂತ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸುವ ಪ್ರತಿಷ್ಠಿತ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ ಏಪ್ರಿಲ್ 21 ರಂದು ಮ್ಯಾಡ್ರಿಡ್‌ನಲ್ಲಿ ನಡೆಯಲಿದೆ, ಅಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ.

ಡಿಸೆಂಬರ್ 2020 ರಲ್ಲಿ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡರು. ಇದು ಅವರ ವೃತ್ತಿ ಬದುಕನ್ನು ಮುಗಿಸಿತು ಎಂಬ ಸುದ್ದಿ ಹರಿದಾಡಿತ್ತು.

ಆದರೆ ಅವರು ಮುಂದಿನ 629 ದಿನಗಳಲ್ಲಿ ಕಠಿಣವಾದ ವಿಶ್ರಾಂತಿ ಪಡೆದು, ಆರೋಗ್ಯವನ್ನು ಕಾಪಾಡಿ ಮತ್ತೇ ವಾಪಾಸ್ಸಾದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಾಲಾಶ್ ಜೊತೆ ಮದುವೆ ಮುರಿದ ಬೆನ್ನಲ್ಲೇ ಸ್ಮೃತಿ ಮಂಧಾನ ಮತ್ತು ಕ್ರಿಕೆಟಿಗರು ಮಾಡಿದ್ದೇನು ಗೊತ್ತಾ

ರೋಹಿತ್, ಕೊಹ್ಲಿಗೆ ದೇಶೀಯ ಟೂರ್ನಿ ಮಾಡಲು ಒತ್ತಡ ಹೇರಲಾಗಿದೆಯೇ

ಏಕದಿನ ಕ್ರಿಕೆಟ್‌ನಲ್ಲಿ ಮೋಡಿ ಬೆನ್ನಲ್ಲೇ ಕೊಹ್ಲಿ ವೈಜಾಗ್‌ನ ಪ್ರಮುಖ ದೇವಸ್ಥಾನಕ್ಕೆ ಭೇಟಿ

ಕೊನೆಗೂ ಪಲಾಶ್ ಮುಚ್ಚಲ್ ಜತೆಗಿನ ಮದುವೆ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಿಂದ ಐಪಿಎಲ್‌ ಪಂದ್ಯ ಕೈತಪ್ಪಲ್ಲ ಎಂದ ಡಿಕೆಶಿ

ಮುಂದಿನ ಸುದ್ದಿ
Show comments