Publish Date: Sat, 25 Jun 2022 (09:50 IST)
Updated Date: Sat, 25 Jun 2022 (09:57 IST)
ಲೀಸೆಸ್ಟರ್: ಲೀಸೆಸ್ಟರ್ ಮತ್ತು ಟೀಂ ಇಂಡಿಯಾ ನಡುವಿನ ಅಭ್ಯಾಸ ಪಂದ್ಯದಲ್ಲಿ ಲೀಸೆಸ್ಟರ್ ಪರ ಆಡುತ್ತಿರುವ ಕ್ರಿಕೆಟಿಗ ರಿಷಬ್ ಪಂತ್ ತಮ್ಮ ವಿಕೆಟ್ ಬಿದ್ದಾಗ ತಾವೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ.
ಲೀಸೆಸ್ಟರ್ ಪರ 76 ರನ್ ಸಿಡಿಸಿದ ರಿಷಬ್ ಪಂತ್, ಜಡೇಜಾ ಬೌಲಿಂಗ್ ನಲ್ಲಿ ಶ್ರೇಯಸ್ ಅಯ್ಯರ್ ಗೆ ಕ್ಯಾಚ್ ನೀಡಿದರು. ಈ ವೇಳೆ ರಿಷಬ್ ಟೀಂ ಇಂಡಿಯಾ ಆಟಗಾರರೊಂದಿಗೆ ತಮ್ಮದೇ ವಿಕೆಟ್ ನ ಸೆಲೆಬ್ರೇಷನ್ ಮಾಡಿದರು.
ರಿಷಬ್ ಪಂತ್ ಮೈದಾನದಲ್ಲಿದ್ದಾಗ ತಮಾಷೆಯ ಮೂಲಕವೇ ಎಲ್ಲರಿಗೂ ಮನರಂಜನೆ ಮಾಡುತ್ತಾರೆ. ಈ ಬಾರಿಯೂ ಅದೇ ರೀತಿ ವೀಕ್ಷಕರಿಗೆ ಮನರಂಜನೆ ಒದಗಿಸಿದ್ದಾರೆ.