ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಧ್ಯಪ್ರದೇಶ-ಮುಂಬೈ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಮುಂಬೈ ಬ್ಯಾಟಿಗ ಸರ್ಫರಾಜ್ ಖಾನ್ ಕಣ್ಣೀರಿಟ್ಟ ಘಟನೆ ನಡೆದಿದೆ.
ಮುಂಬೈ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಬ್ಯಾಟ್ ಹಿಡಿದು ಬಂದು 134 ರನ್ ಗಳಿಸಿದ ಸರ್ಫರಾಜ್ ಶತಕ ಗಳಿಸುತ್ತಿದ್ದಂತೇ ಅಬ್ಬರದ ಸೆಲೆಬ್ರೇಷನ್ ಮಾಡಿದರು. ಜೊತೆಗೆ ಕಣ್ಣೀರಿಟ್ಟರು. ಕಣ್ಣೀರು ಹಾಕುತ್ತಲೇ ತೊಡೆ ತಟ್ಟಿ ಸಂಭ್ರಮಿಸಿದರು. ಅವರ ಈ ಅಬ್ಬರದ ಸಂಭ್ರಮಾಚರಣೆಯನ್ನು ಬಿಸಿಸಿಐ ತನ್ನ ಟ್ವಿಟರ್ ಪುಟದಲ್ಲಿ ಪ್ರಕಟಿಸಿದೆ.
ಸರ್ಫರಾಜ್ ಖಾನ್ ಈ ರಣಜಿ ಋತುವಿನಲ್ಲಿ ಸಿಡಿಸುತ್ತಿರುವ ನಾಲ್ಕನೇ ಶತಕ ಇದಾಗಿದೆ. ಮುಂಬೈ 374 ರನ್ ಗಳಿಗೆ ಆಲೌಟ್ ಆಗಿದ್ದು, ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಮಧ್ಯಪ್ರದೇಶ 1 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ ಸುಸ್ಥಿತಿಯಲ್ಲಿದೆ.