Publish Date: Fri, 24 Jun 2022 (09:20 IST)
Updated Date: Fri, 24 Jun 2022 (09:34 IST)
ಲೀಸೆಸ್ಟರ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಮುನ್ನ ಲೀಸೆಸ್ಟರ್ ತಂಡದ ವಿರುದ್ಧ ಅಭ್ಯಾಸ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರು ರನ್ ಗಳಿಸಲು ಪರದಾಡಿದ್ದಾರೆ.
ಟೀಂ ಇಂಡಿಯಾ ಅಗ್ರ ಕ್ರಮಾಂಕದ ಆಟಗಾರರು ರನ್ ಗಳಿಸಲು ವಿಫಲರಾದರು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ದಿನದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಲಷ್ಟೇ ಶಕ್ತವಾಗಿದೆ.
ನಾಯಕ ರೋಹಿತ್ ಶರ್ಮಾ25, ಶುಬ್ನಂ ಗಿಲ್ 21, ಹನುಮ ವಿಹಾರಿ 3, ವಿರಾಟ್ ಕೊಹ್ಲಿ 33, ರವೀಂದ್ರ ಜಡೇಜಾ 13, ಉಮೇಶ್ ಯಾದವ್ 23, ಶ್ರಾದ್ಧೂಲ್ ಠಾಕೂರ್ 6 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ನಿರ್ಗಮಿಸಿದರು. ಆದರೆ ಯುವ ಬ್ಯಾಟಿಗ ಶ್ರೀಕರ್ ಭರತ್ ಉತ್ತಮ ಬ್ಯಾಟಿಂಗ್ ನಡೆಸಿದ್ದು ನಿನ್ನೆಯ ದಿನದಂತ್ಯಕ್ಕೆ 70 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಅವರಿಗೆ ತಕ್ಕ ಸಾಥ್ ನೀಡಿರುವ ಮೊಹಮ್ಮದ್ ಶಮಿ 18 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಲೀಸೆಸ್ಟರ್ ಪರ ಬೌಲಿಂಗ್ ಮಾಡುತ್ತಿರುವ ಟೀಂ ಇಂಡಿಯಾದ ಜಸ್ಪ್ರೀತ್ ಬುಮ್ರಾ ವಿಕೆಟ್ ಕೀಳಲು ವಿಫಲರಾಗಿದ್ದರೆ, ಪ್ರಸಿದ್ಧ ಕೃಷ್ಣ 1 ವಿಕೆಟ್ ತಮ್ಮದಾಗಿಸಿಕೊಂಡರು. ರೋಮನ್ ವಾಕರ್ 5 ವಿಕೆಟ್ ಗಳ ಗೊಂಚಲು ಪಡೆದರು. ರಿಷಬ್ ಪಂತ್, ಚೇತೇಶ್ವರ ಪೂಜಾರ ಕೂಡಾ ಲೀಸೆಸ್ಟರ್ ಪರ ಆಡುತ್ತಿದ್ದಾರೆ.
Krishnaveni K
Publish Date: Fri, 24 Jun 2022 (09:20 IST)
Updated Date: Fri, 24 Jun 2022 (09:34 IST)