ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಇದೀಗ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಕ್ಷಣವೊಂದು ಎದುರಾಗುತ್ತಿದೆ. ಐಪಿಎಲ್ ಆವೃತ್ತಿಯಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಎರಡು ತಂಡಗಳು ಹಾಗೂ ಬದ್ಧವೈರಿಗಳು ಮುಂದಿನ ಪಂದ್ಯಾಟದಲ್ಲಿ ಮುಖಾಮುಖಿಯಾಗಲಿದೆ.
ಮೇ 3ರಂದು ಆರ್‌ಸಿಬಿ ಹಾಗೂ ಸಿಎಸ್‌ಕೆ ಮುಖಾಮುಖಿಯಾಗಲಿದೆ. ಇನ್ನೊಂದು ಖುಷಿಯ ವಿಚಾರ ಏನೆಂದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿಎಸ್‌ಕೆಯನ್ನು ಆರ್‌ಸಿಬಿ ಎದುರಿಸಲಿದೆ.
ಈ ಹಿಂದೆ ಆರ್‌ಸಿಬಿ, ಸಿಎಸ್‌ಕೆಯನ್ನು ಅದರ ತವರು ನೆಲದಲ್ಲಿ ಸೋಲಿಸಿತು. ಈ ಮೂಲಕ ಹೊಸ ಇತಿಹಾಸವನ್ನು ಬರೆಯಿತು. ಇದೀಗ ತನ್ನ ತವರಿನಲ್ಲೇ ಸಿಎಸ್‌ಕೆಯನ್ನು ಆರ್‌ಸಿಬಿ ಎದುರಿಸಲಿದ್ದು, ಅಭಿಮಾನಿಗಳು ಮಾತ್ರ ಈ ಪಂದ್ಯಾಟಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ಹಿಂದಿನಿಂದಲೂ ಸಿಎಸ್‌ಕೆ ಹಾಗೂ ಆರ್‌ಸಿಬಿ ತಂಡಗಳ ನಡುವಿನ ಪಂದ್ಯಾಟ ಇಂಡಿಯ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟದ ಕ್ರೇಜ್ ಇದ್ದ ಹಾಗೇ.
ಈ ಕ್ಷಣಕ್ಕಾಗಿ ಒಬ್ಬರನೊಬ್ಬರ ಕಾಲೆಳೆಯಲು ಎರಡು ತಂಡದ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ.
ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯಾಟದಲ್ಲಿ ಜಯ ಸಾಧಿಸುವ ಮೂಲಕ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ಹ್ಯಾಟ್ರಿಕ್ ಸೋಲಿನಿಂದ ಕೊನೆಯ ಸ್ಥಾನದಲ್ಲಿದೆ.
ಈಗಾಗಲೇ ಪ್ಲೇ ಆಫ್‌ನಿಂದ ಹೊರಕ್ಕೆ ಬೀಳುವ ಹಂತದಲ್ಲಿರುವ ಸಿಎಸ್‌ಕೆಗೆ ಆರ್‌ಸಿಬಿ ವಿರುದ್ಧದ ನಾಳಿನ ಪಂದ್ಯಾಟ ತುಂಬಾನೇ ಮುಖ್ಯವಾಗಿದೆ.