Publish Date: Fri, 21 Apr 2023 (09:44 IST)
Updated Date: Fri, 21 Apr 2023 (09:45 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತೀ ಐಪಿಎಲ್ ನಲ್ಲೂ ಒಂದು ಪಂದ್ಯಕ್ಕೆ ಹಸಿರು ಬಣ್ಣದ ಜೆರ್ಸಿ ತೊಟ್ಟು ಆಡುತ್ತದೆ.
ಈ ಬಾರಿಯೂ ಆರ್ ಸಿಬಿ ಆಟಗಾರರು ಗ್ರೀನ್ ಜೆರ್ಸಿಯಲ್ಲಿ ಕಂಗೊಳಿಸಲಿದ್ದಾರೆ. ಏಪ್ರಿಲ್ 23 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆರ್ ಸಿಬಿ ಆಟಗಾರರು ಹಸಿರು ಜೆರ್ಸಿ ತೊಡಲಿದ್ದಾರೆ.
ಹಸಿರು ಉಳಿಸಿ, ಬೆಳೆಸಿ ಎನ್ನುವ ಸಂದೇಶ ನೀಡುವ ಸಲುವಾಗಿ ಪ್ರತೀ ಬಾರಿ ಆರ್ ಸಿಬಿ ಆಟಗಾರರು ಉಡುಗೆ ಬಣ್ಣ ಬದಲಾಯಿಸುತ್ತಾರೆ.