Daily Horoscope

Select Your Language

Notifications

webdunia
webdunia
webdunia
webdunia

ಬಾಸ್ ಗೆ ಸುಳ್ಳು ಹೇಳಿ ಐಪಿಎಲ್ ಗೆ ಹೋಗಿ ಬಾಸ್ ಕೈಯಲ್ಲೇ ಸಿಕ್ಕಿ ಹಾಕಿಕೊಂಡ ಆರ್ ಸಿಬಿ ಅಭಿಮಾನಿ

RCB fan
Photo Courtesy: Twitter
ಬೆಂಗಳೂರು:  ಐಪಿಎಲ್ ಪಂದ್ಯಾವಳಿಯನ್ನು ಮೈದಾನದಲ್ಲೇ ನೋಡಲು ಅಭಿಮಾನಿಗಳು ಏನೇನೋ ಸರ್ಕಸ್ ಮಾಡುತ್ತಾರೆ. ಇದೀಗ ಮಹಿಳೆಯೊಬ್ಬರು ಐಪಿಎಲ್ ಗೆ ಹೋಗಲು ಬಾಸ್ ಗೆ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಪ್ಪಟ ಅಭಿಮಾನಿ ಮಹಿಳೆ ಲಕ್ನೋ ವಿರುದ್ಧದ ಪಂದ್ಯ ವೀಕ್ಷಿಸಲು ನೇಹಾ ದ್ವಿವೇದಿ ಎಂಬ ಯುವತಿ ಟಿಕೆಟ್ ಖರೀದಿಸಿದ್ದಳು. ಇದಕ್ಕಾಗಿ ಮನೆಯಲ್ಲಿ ಸ್ವಲ್ಪ ಸಮಸ್ಯೆಯಾಗಿದೆ, ಬೇಗ ಹೋಗಬೇಕು ಎಂದು ಬಾಸ್ ಗೆ ಸುಳ್ಳು ಹೇಳಿ ಕಚೇರಿಯಿಂದ ತೆರಳಿದ್ದರು.

ಆದರೆ ಮೈದಾನದಲ್ಲಿ ಪಂದ್ಯ ವೀಕ್ಷಿಸುವಾಗ ಟಿವಿ ಕ್ಯಾಮರಾಗಳು ಅವರನ್ನು ಸೆರೆಹಿಡಿದಿವೆ. ಇದನ್ನು ಬಾಸ್ ನೋಡಿದ್ದಾರೆ. ಮನೆಯಲ್ಲಿ ಸಮಸ್ಯೆಯಿದೆ ಎಂದು ಸುಳ್ಳು ಹೇಳಿ ಹೋಗಿದ್ದ ತನ್ನ ಉದ್ಯೋಗಿ ಮ್ಯಾಚ್ ನೋಡುತ್ತಿರುವುದು ನೋಡಿ ಬಾಸ್ ಗೆ ಶಾಕ್ ಆಗಿದೆ.

ಮಹಿಳೆಯ ಅದೃಷ್ಟಕ್ಕೆ ಬಾಸ್ ಇದನ್ನು ಹಗುರವಾಗಿಯೇ ತೆಗೆದುಕೊಂಡಿದ್ದಾರೆ. ಪಂದ್ಯ ಮುಗಿದ ಮೇಲೆ ನೀವು ಆರ್ ಸಿಬಿ ಅಭಿಮಾನಿಯೇ ಎಂದು ಸಂದೇಶ ಕಳುಹಿಸಿದ್ದಾರೆ. ಹೌದು ಎಂದಿದ್ದಕ್ಕೆ ನಾನು ನಿಮ್ಮನ್ನು ಟಿವಿಯಲ್ಲಿ ನೋಡಿದೆ. ಕ್ಯಾಚ್ ಬಿಟ್ಟಾಗ ನೀವು ಬಹಳ ಬೇಸರಗೊಂಡಿರಿ’ ಎಂದು ಉತ್ತರಿಸಿದ್ದಾರೆ. ಬಾಸ್ ಉತ್ತರ ನೋಡಿ ಮಹಿಳೆಗೆ ಶಾಕ್ ಆಗಿದೆ. ಆದರೆ ಅವರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಸಮಾಧಾನಕರ ಅಂಶ.

Share this Story:

Follow Webdunia kannada

ಮುಂದಿನ ಸುದ್ದಿ

ರವಿಶಾಸ್ತ್ರಿ ಹಾಟ್ ಫೋಟೋ ನೋಡಿ ನೆಟ್ಟಿಗರು ಕನ್ ಫ್ಯೂಸ್