Select Your Language

Notifications

webdunia
webdunia
webdunia
Wednesday, 9 April 2025
webdunia

ಐಪಿಎಲ್ 2024: ಸೋಲರಿಯದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಗೆಲ್ಲುವ ಸವಾಲು

Sanju Samson

Krishnaveni K

ಜೈಪುರ , ಬುಧವಾರ, 10 ಏಪ್ರಿಲ್ 2024 (10:31 IST)
ಜೈಪುರ: ಐಪಿಎಲ್ 2024 ರಲ್ಲಿ ಇದುವರೆಗೆ ಸೋಲೇ ಕಾಣದ ರಾಜಸ್ಥಾನ್ ರಾಯಲ್ಸ್ ಮತ್ತು ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಗುಜರಾತ್ ಟೈಟನ್ಸ್ ಮುಖಾಮುಖಿಯಾಗುತ್ತಿದೆ.

ಈ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದ ತಂಡವೆಂದರೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್. ಇದಕ್ಕೆ ಮುಖ್ಯವಾಗಿ ಸಂಜು ಸ್ಯಾಮ್ಸನ್ ಜಾಣ್ಮೆಯ ನಾಯಕತ್ವ ಕಾರಣ ಎನ್ನಬಹುದು. ಸ್ವತಃ ಫಾರ್ಮ್ ನಲ್ಲಿರುವುದಲ್ಲದೆ, ತಮ್ಮ ಯುವ ಬೌಲರ್ ಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಇದುವರೆಗೆ ಆಡಿದ ನಾಲ್ಕು ಪಂದ್ಯಗಳ ಪೈಕಿ ನಾಲ್ಕರಲ್ಲೂ ರಾಜಸ್ಥಾನ್ ಗೆಲುವು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅದರ ತವರು ನೆಲದಲ್ಲೇ ಸೋಲಿಸಿದ್ದು ಮತ್ತೊಂದು ವಿಶೇಷ. ಇಂದಿನ ಪಂದ್ಯ ರಾಜಸ್ಥಾನ್ ಗೆ ತವರು ಜೈಪುರದಲ್ಲಿ ನಡೆಯುತ್ತಿರುವುದರಿಂದ ಮತ್ತೊಂದು ಪ್ಲಸ್ ಪಾಯಿಂಟ್‍ ಇರಲಿದೆ.

ಇತ್ತ ಗುಜರಾತ್ ಟೈಟನ್ಸ್ ಗೆ ಯಾಕೋ ಶುಬ್ಮನ್ ಗಿಲ್ ನೇತೃತ್ವದಲ್ಲಿ ಹೇಳಿಕೊಳ್ಳುವ ಯಶಸ್ಸು ಸಿಕ್ಕಿಲ್ಲ. ಕಳೆದ ಎರಡು ಪಂದ್ಯಗಳ ಸತತ ಸೋಲು ಕಂಡಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ತಂಡ ಹೀನಾಯ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿತ್ತು. ಯಾಕೋ ಕೋಚ್ ಆಶಿಷ್ ನೆಹ್ರಾ ಪ್ಲ್ಯಾನ್ ವರ್ಕೌಟ್ ಆಗಿರಲಿಲ್ಲ. ಇಂದು ರಾಜಸ್ಥಾನ್ ತಂಡವನ್ನು ಮಣಿಸಬೇಕಾದರೆ ಗಿಲ್ ಬಳಗ ಸರ್ವಾಂಗೀಣ ಪ್ರದರ್ಶನ ನೀಡಬೇಕಾಗುತ್ತದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ ರಿಷಬ್ ಪಂತ್: ಸಂಜು ಸ್ಯಾಮ್ಸನ್ ಏನು ತಪ್ಪು ಮಾಡಿದ್ದಾರೆ ಎಂದು ಫ್ಯಾನ್ಸ್ ಆಕ್ರೋಶ