Publish Date: Wed, 10 Apr 2024 (14:12 IST)
Updated Date: Wed, 10 Apr 2024 (15:15 IST)
ಮುಂಬೈ: ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಾಟ್ ಫೋಟೋವೊಂದನ್ನು ಪ್ರಕಟಿಸಲಾಗಿದ್ದು, ನೆಟ್ಟಿಗರು ಫುಲ್ ಕನ್ ಫ್ಯೂಸ್ ಆಗಿದ್ದಾರೆ.
61 ವರ್ಷದ ರವಿ ಶಾಸ್ತ್ರಿ 20 ವರ್ಷದ ಯಂಗ್ ಹೀರೋ ರೀತಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಇದು ನಿಜವಾಗಿಯೂ ರವಿಶಾಸ್ತ್ರಿ ಮಾಡಿರುವ ಪೋಸ್ಟಾ ಅಥವಾ ಅವರ ಖಾತೆ ಹ್ಯಾಕ್ ಆಗಿದೆಯಾ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು ಇದು ಯಾವುದೋ ಜಾಹೀರಾತಿಗಾಗಿ ಮಾಡಿರುವ ಫೋಟೋ ಶೂಟ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಫೋಟೋ ಜೊತೆಗೆ ನಾನು ಹಾಟೀ, ನಾನು ನಾಟೀ, ನಾನು ಸಿಕ್ಸ್ಟೀ ಎಂದು ಅಡಿಬರಹವನ್ನೂ ಬರೆದುಕೊಂಡಿದ್ದಾರೆ.
ಪೋಸ್ಟ್ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವ್ಯೂ, ಸಾವಿರಾರು ಲೈಕ್ಸ್ ಬಂದಿದೆ. 60 ರ ಹರೆಯದಲ್ಲೂ ಯಾವ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನೀವು ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.