ಬೆಂಗಳೂರು: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವಿರಾಟ್ ಕೊಹ್ಲಿ ಅಲ್ಲ, ಅಚ್ಚರಿಯ ಹೆಸರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ.
ಟೀಂ ಇಂಡಿಯಾದವರೇ ಆದ ರಜತ್ ಮನೋಹರ್ ಪಟಿದಾರ್ ಆರ್ ಸಿಬಿ ಹೊಸ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಆರ್ ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಇದೀಗ ತಾನೇ ಘೋಷಣೆ ಮಾಡಿದೆ.
ಸ್ವತಃ ವಿರಾಟ್ ಕೊಹ್ಲಿಯೇ ವಿಡಿಯೋ ಮೂಲಕ ಹೊಸ ನಾಯಕನ ಹೆಸರು ಘೋಷಣೆ ಮಾಡಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ಹಿಂದೆ ನಾವು ಯಾವತ್ತೂ ಇರುತ್ತೇವೆ ಎಂದು ಕೊಹ್ಲಿ ಬೆಂಬಲ ನೀಡಿದ್ದಾರೆ.
ಆರ್ ಸಿಬಿ ಹೊಸ ನಾಯಕನ ಘೋಷಣೆ ಮಾಡಲಿದೆ ಎಂದಾಗ ಹಲವರು ವಿರಾಟ್ ಕೊಹ್ಲಿ ನಾಯಕನಾಗಬಹುದು ಎಂದುಕೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಗಿಸಿ ಯುವ ಆಟಗಾರನನ್ನು ಆರ್ ಸಿಬಿ ನಾಯಕನಾಗಿ ಘೋಷಣೆ ಮಾಡಿದೆ.