Select Your Language

Notifications

webdunia
webdunia
webdunia
webdunia

32 ವರ್ಷಗಳ ಹಿಂದೆ ಗೆದ್ದ ಕಾರನ್ನು ಮರಳಿ ಪಡೆದ ರವಿಶಾಸ್ತ್ರಿ

32 ವರ್ಷಗಳ ಹಿಂದೆ ಗೆದ್ದ ಕಾರನ್ನು ಮರಳಿ ಪಡೆದ ರವಿಶಾಸ್ತ್ರಿ
ಮುಂಬೈ , ಶನಿವಾರ, 4 ಜೂನ್ 2022 (17:14 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕೋಚ್ ರವಿಶಾಸ್ತ್ರಿ 32 ವರ್ಷಗಳ ಹಿಂದೆ ಬಹುಮಾನವಾಗಿ ಪಡೆದಿದ್ದ ಆಡಿ 100 ಕಾರನ್ನು ಮರಳಿ ಪಡೆದಿದ್ದಾರೆ.

32 ವರ್ಷಗಳ ಹಿಂದೆ ಅಂದರೆ 1985 ರ ವಿಶ್ವಚಾಂಪಿಯನ್ ಶಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಕ್ಕೆ ರವಿಶಾಸ್ತ್ರಿ ಈ ಕಾರನ್ನು ಉಡುಗೊರೆಯಾಗಿ ಪಡೆದಿದ್ದರು. ಆದರೆ ಬಳಿಕ ಇದು ದುರಸ್ಥಿಗೆ ಬಿದ್ದಿತ್ತು.

ಆದರೆ ಹಳೆಯ ಮಾಡೆಲ್ ನ ಕಾರಾಗಿದ್ದರಿಂದ ಅದರ ದುರಸ್ಥಿಗೆ ಬಿಡಿಭಾಗಗಳು ಸಿಗುತ್ತಿರಲಿಲ್ಲ. ಹೀಗಾಗಿ ರವಿಶಾಸ್ತ್ರಿ ರೇಮಂಡ್ ಗ್ರೂಪ್ ನ ಅಧ್ಯಕ್ಷ ಗೌತಮ್ ಸಿಂಘಾನಿಯಾ ನಿರ್ವಹಿಸುತ್ತಿರುವ  ಸೂಪರ್ ಕಾರ್ ಕ್ಲಬ್ ಗ್ಯಾರೇಜ್ ಗೆ ಕಾರನ್ನು ಹಸ್ತಾಂತರಿಸಿದ್ದರು. ಇದೀಗ ಅವರು 8 ತಿಂಗಳ ಕಾಲ ಶ್ರಮವಹಿಸಿ ಕಾರನ್ನು ದುರಸ್ಥಿ ಮಾಡಿ ರವಿಶಾಸ್ತ್ರಿಗೆ ಮರಳಿಸಿದ್ದಾರೆ. ಕಾರನ್ನು ನೋಡಿ ಭಾವುಕರಾಗಿರುವ ರವಿಶಾಸ್ತ್ರಿ 32 ವರ್ಷದ ಹಿಂದೆ ನನಗೆ ನೀಡಿದ್ದ ರೀತಿಯಲ್ಲೇ ಇದೆ ಅನಿಸಿತು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

5000 ಮಕ್ಕಳ ಹಸಿವು ನೀಗಿಸಲು ಐಪಿಎಲ್ ನಲ್ಲಿ ದುಡಿಯುತ್ತಿದ್ದೇನೆ ಎಂದ ಗೌತಮ್ ಗಂಭೀರ್