Publish Date: Fri, 03 Jan 2020 (11:58 IST)
Updated Date: Fri, 03 Jan 2020 (12:01 IST)
ಮುಂಬೈ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಪ್ರಬಲ ಮುಂಬೈ ವಿರುದ್ಧ ಮೊದಲ ದಿನದ ಮೊದಲ ಅವಧಿಯಲ್ಲಿ ಕರ್ನಾಟಕ ಬೌಲರ್ ಗಳು ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಕರ್ನಾಟಕ ಅದನ್ನು ಸರಿಯಾಗಿಯೇ ಸಮರ್ಥಿಸಿಕೊಂಡಿದೆ. ಮೊದಲ ದಿನದ ಭೋಜನ ವಿರಾಮದ ವೇಳೆಗೆ ಅತಿಥೇಯ ತಂಡ 6 ವಿಕೆಟ್ ಗೆ 86 ರನ್ ಗಳಿಸಿ ಸಂಕಷ್ಟದಲ್ಲಿದೆ.
ಅದರಲ್ಲೂ ಪ್ರಮುಖ ಬ್ಯಾಟ್ಸ್ ಮನ್ ಗಳಾದ ಆದಿತ್ಯ ತಾರೆ ಶೂನ್ಯಕ್ಕೆ ನಿರ್ಗಮಿಸಿದರೆ ಅನುಭವಿ ಅಜಿಂಕ್ಯಾ ರೆಹಾನೆ 7 ಕ್ಕೆ ಔಟಾದರು. ಇದೀಗ ನಾಯಕ ಸೂರ್ಯಕುಮಾರ್ ಯಾದವ್ 33 ಮತ್ತು ಶಶಾಂಕ್ ಅಥಾರ್ಡೆ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಕರ್ನಾಟಕ ಪರ ರೋನಿತ್ ಮೋರೆ, ಪ್ರತೀಕ್ ಜೈನ್ ತಲಾ 2 ಮತ್ತು ಅಭಿಮನ್ಯು ಮಿಥುನ್, ವಿ ಕೌಶಿಕ್ ತಲಾ 1 ವಿಕೆಟ್ ಕಬಳಿಸಿದ್ದಾರೆ.