Publish Date: Fri, 14 Dec 2018 (09:45 IST)
Updated Date: Fri, 14 Dec 2018 (09:46 IST)
ಸೂರತ್: ರಣಜಿ ಟ್ರೋಫಿ ಪಂದ್ಯಾವಳಿಯ ಎಲೈಟ್ ಎ ಗುಂಪಿನ ಪಂದ್ಯದಲ್ಲಿ ಇಂದು ಕರ್ನಾಟಕ ಗುಜರಾತ್ ತಂಡವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಗುಜರಾತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಸೌರಾಷ್ಟ್ರ ವಿರುದ್ಧ ಕಳೆದ ಪಂದ್ಯ ಸೋತ ಕರ್ನಾಟಕಕ್ಕೆ ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್, ಕೆ ಗೌತಮ್ ಪುನರಾಗಮನ ಬಲ ನೀಡಲಿದೆ. ಈ ಋತುವಿನಲ್ಲಿ ಒಂದು ಗೆಲುವು, ಎರಡು ಡ್ರಾ ಮತ್ತು ಒಂದು ಸೋಲು ಗಳಿಸಿರುವ ಕರ್ನಾಟಕದ ಎದುರಾಳಿ ಗುಜರಾತ್ ಬಲಿಷ್ಠವಾಗಿದೆ.
ಈಗಾಗಲೇ ಎರಡು ಪಂದ್ಯ ಗೆದ್ದಿರುವ ಗುಜರಾತ್ ಒಂದೇ ಒಂದು ಸೋಲು ಕಂಡಿಲ್ಲ. ಅಲ್ಲದೆ, ಇದು ತವರಿನಲ್ಲಿ ನಡೆಯುವ ಪಂದ್ಯವಾಗಿರುವುದರಿಂದ ಗುಜರಾತ್ ಗೆ ಬಲ ಹೆಚ್ಚಿದೆ. ಕಳೆದ ಪಂದ್ಯದಲ್ಲಿ ಕರ್ನಾಟಕ ಉತ್ತಮ ಜತೆಯಾಟ ಕಂಡುಕೊಳ್ಳುವಲ್ಲಿ ವಿಫಲವಾಗಿತ್ತು. ಈ ಪಂದ್ಯದಲ್ಲಿ ಬ್ಯಾಟಿಂಗ್ ತಪ್ಪುಗಳನ್ನು ಸುಧಾರಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ವಿನಯ್ ಕುಮಾರ್ ಪಡೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ